alex Certify BIG NEWS: ಭೂಮಿ ಸಮೀಪಿಸಿದ ಮತ್ತೊಂದು ಕ್ಷುದ್ರಗ್ರಹ ಪತ್ತೆ ಮಾಡಿದ ನಾಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೂಮಿ ಸಮೀಪಿಸಿದ ಮತ್ತೊಂದು ಕ್ಷುದ್ರಗ್ರಹ ಪತ್ತೆ ಮಾಡಿದ ನಾಸಾ

ನಾಸಾದ ಜೆಟ್​ ಪ್ರೋಪಲ್ಕ್ಷನ್​​ ಲ್ಯಾಬೋರೇಟರಿಯು ಭೂಮಿಯಿಂದ ಕೇವಲ 1.7 ಮಿಲಿಯನ್​ ಕಿಲೋಮೀಟರ್​ ದೂರದಲ್ಲಿ ಹಾದು ಹೋಗುತ್ತಿರುವ ಕ್ಷುದ್ರಗಹವನ್ನು ಪತ್ತೆ ಮಾಡಿದೆ. ಇದು ಭೂಮಿಯ ಸಮೀಪ ಹಾದು ಹೋಗುವ 1000ನೇ ಕ್ಷುದ್ರಗ್ರಹವಾಗಿದೆ ಎಂದು ನಾಸಾ ಹೇಳಿದೆ.

ಈ ಕ್ಷುದ್ರಗ್ರಹವು ಭೂಮಿಗೆ ಯಾವುದೇ ಹಾನಿ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆಯಾದರೂ ಅದರ ಸಣ್ಣ ಗಾತ್ರದಿಂದಾಗಿ ಈ ಕ್ಷುದ್ರಗ್ರಹವನ್ನು ಟ್ರ್ಯಾಕ್​ ಮಾಡುವುದು ಕಷ್ಟದ ಕೆಲಸವಾಗಿ ಪರಿಣಮಿಸಿದೆ.

ರಾಡಾರ್​ನ ಪ್ರಾಥಮಿಕ ವೀಕ್ಷಣೆಯ ಪ್ರಕಾರ ಇದು 65ರಿಂದ 100 ಅಡಿ ಅಗಲ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಇಷ್ಟು ಸಣ್ಣ ಕ್ಷುದ್ರಗ್ರಹ ಆಗಿದ್ದರೂ ಸಹ ಭೂಮಿಗೆ ಸಮೀಪಿಸುತ್ತಿರುವ 1000ನೇ ಕ್ಷುದ್ರಗ್ರಹವಾಗಿರುವುದರಿಂದ ಇತಿಹಾಸದ ಪುಟಗಳಲ್ಲಿ ನಮೂದಾಗಲಿದೆ.

ಇದಾಗಿ 7 ದಿನಗಳ ಬಳಿಕ 1001ನೇ ಕಾಯವೊಂದು ಭೂಮಿಗೆ ಸಮೀಪಿಸಲಿದೆ ಎಂದೂ ಜೆಟ್​​ ಪ್ರೊಲ್ಶನ್​ ಲ್ಯಾಬೋರೇಟರಿ ಹೇಳಿದೆ. ಆದರೆ ಇದು ಗಾತ್ರದಲ್ಲಿ ದೊಡ್ಡದಾಗಿ ಇರಲಿದೆ. ಇದು ಭೂಮಿಯಿಂದ 3.4 ಮಿಲಿಯನ್​ ಕಿಲೋಮೀಟರ್​ನಿಂದ ಹಾದು ಹೋಗಲಿದೆ ಎನ್ನಲಾಗಿದೆ.

2021 ಪಿಜೆ 1 ಇಂದು ಸಣ್ಣ ಕ್ಷುದ್ರಗ್ರಹವಾಗಿದೆ. ಇದು ಭೂಮಿಯಿಂದ 1 ಮಿಲಿಯನ್ ಮೈಲಿ ದೂರದಲ್ಲಿ ಹಾದು ಹೋಗಿರುವುದರಿಂದ ಇದರ ವಿವರವಾದ ಚಿತ್ರಣವನ್ನು ರಾಡಾರ್​ನಿಂದ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅದರ ವೇಗ ಹಾಗೂ ನಿಖರತೆಯನ್ನು ಅಳೆಯುವಲ್ಲಿ ರಾಡಾರ್​ ಯಶಸ್ವಿಯಾಗಿದೆ ಎಂದು ನಾಸಾದ ಕ್ಷುದ್ರಗ್ರಹ ಸಂಶೋಧನಾ ಕಾರ್ಯಕ್ರಮದ ಮೇಲ್ವಿಚಾರಕ ಲ್ಯಾನ್ಸ್​​ ಬೆನ್ನರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...