alex Certify ಗಲಭೆ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ 134 ಮಂದಿ ಖುಲಾಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲಭೆ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ 134 ಮಂದಿ ಖುಲಾಸೆ

2014ರ ಮೇ 26ರಂದು ನಡೆದಿದ್ದ ಗಲಭೆ ಪ್ರಕರಣದ ತೀರ್ಪು ಹೊರಬಂದಿದ್ದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ ಒಟ್ಟು 134 ಜನರು ಖುಲಾಸೆಗೊಂಡಿದ್ದಾರೆ. ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಹಾಗೂ ಪ್ರಚೋದನಕಾರಿ ಭಾಷಣದ ಆರೋಪವನ್ನು ಯತ್ನಾಳ್​ ಎದುರಿಸುತ್ತಿದ್ದರು.

ಕೋರ್ಟ್ ಆದೇಶದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ನ್ಯಾಯಾಲಯದಿಂದ ಒಳ್ಳೆಯ ನ್ಯಾಯವೇ ಸಿಕ್ಕಿದೆ. ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ ಸಹ ಅನೇಕರನ್ನು ಇದರಲ್ಲಿ ಸಿಲುಕಿಸಲಾಗಿತ್ತು. ಅವರಿಗೂ ಇದರಿಂದ ನ್ಯಾಯ ಸಿಕ್ಕಿದೆ. ತೀರ್ಪು ಪ್ರಕಟಿಸಿದ ಕೋರ್ಟ್​ಗೆ ಧನ್ಯವಾದ ಅರ್ಪಿಸುತ್ತೇನೆ. ಅಮಿತ್​ ಶಾ ವರ್ಸಸ್​ ಗುಜರಾತ್ ಸರ್ಕಾರಿ ಮಾದರಿಯಲ್ಲಿ ನಮ್ಮ ಕೇಸ್​​ ಬಿಡುಗಡೆಯಾಗಿದೆ. ಪೊಲೀಸರು ಹಾಕಿದ 2 ಕೇಸ್​ಗಳ ತೀರ್ಪು ಇಂದು ಬಂದಿದೆ. ಇನ್ನೊಂದು ಕೇಸ್​ ನ ತೀರ್ಪು ಇನ್ನೂ ಬರಬೇಕಿದೆ. ಅದು ಕೂಡ ಸಾಕ್ಷಿಗಳ ಹೇಳಿಕೆ ದಾಖಲಿಸಿದ ಬಳಿಕ ಬರಲಿದೆ ಎಂದು ಹೇಳಿದ್ರು.

ನಗರದ ಗಾಂಧಿಚೌಕ್​ ಪೊಲೀಸರು ವಿಜಯಪುರ ನಗರ ಶಾಸಕ ಬಸನಗೌಡಪಾಟೀಲ್​ ಯತ್ನಾಳ್​ ಸೇರಿದಂತೆ 134 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ. ಜಯಂತಕುಮಾರ್​ ಎಲ್ಲರೂ ನಿರ್ದೋಷಿಗಳು ಎಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ವೇಳೆ ನಡೆದಿದ್ದ ಗಲಾಟೆಯಲ್ಲಿ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆದಿತ್ತು. ಗಲಭೆಯಲ್ಲಿ ಅನೇಕ ವಾಹನಗಳಿಗೆ ಬೆಂಕಿ ಕೂಡ ಹಚ್ಚಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...