alex Certify ತಾಯಿ ಕಣ್ಣೆದುರೇ ಸಾವನ್ನಪ್ಪಿದ ʼನಮ್ಮಮ್ಮ ಸೂಪರ್ ಸ್ಟಾರ್‌ʼ ಸ್ಪರ್ಧಿ ಸಮನ್ವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಕಣ್ಣೆದುರೇ ಸಾವನ್ನಪ್ಪಿದ ʼನಮ್ಮಮ್ಮ ಸೂಪರ್ ಸ್ಟಾರ್‌ʼ ಸ್ಪರ್ಧಿ ಸಮನ್ವಿ

ಖಾಸಗಿ ವಾಹಿನಿಯ ರಿಯಾಲಿಟಿ ಷೋ ʼನಮ್ಮಮ್ಮ ಸೂಪರ್‌ ಸ್ಟಾರ್‌ʼ ನಲ್ಲಿ ತನ್ನ ಮುದ್ದಾದ ಮಾತುಗಳಿಂದ ಮನೆ ಮಾತಾಗಿದ್ದ 6 ವರ್ಷದ ಬಾಲಕಿ ಸಮನ್ವಿ ಬೆಂಗಳೂರಿನ ಕೋಣನಕುಂಟೆ ಬಳಿ ನಡೆದ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾಳೆ. ತನ್ನ ತಾಯಿ ಅಮೃತಾ ನಾಯ್ಡು ಅವರ ಜೊತೆ ಗುರುವಾರ ಸಂಜೆ ಸಮನ್ವಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ಈ ಅಪಘಾತದಲ್ಲಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತಾಯಿ ಅಮೃತಾ ನಾಯ್ಡು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಖ್ಯಾತ ಹರಿಕಥೆ ವಿದ್ವಾನ್‌ ಗುರುರಾಜುಲು ನಾಯ್ಡು ಅವರ ಮೊಮ್ಮಗಳಾಗಿದ್ದ ಸಮನ್ವಿಯ ದುರಂತ ಸಾವಿಗೆ ಕಿರುತೆರೆ ಹಾಗೂ ಚಿತ್ರರಂಗದ ಕಲಾವಿದರು ಕಣ್ಣೀರು ಮಿಡಿಯುತ್ತಿದ್ದಾರೆ.

ಅಮೃತಾ ನಾಯ್ಡು ಅವರ ಒಂದು ಮಗು ಈ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿತ್ತೆನ್ನಲಾಗಿದ್ದು, ಇದೀಗ ಮತ್ತೊಂದು ಮಗು ಅಪಘಾತದಲ್ಲಿ ತಾಯಿ ಕಣ್ಣೆದುರೇ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಅಘಾತವನ್ನುಂಟು ಮಾಡಿದೆ. ಬಾಲಕಿ ಮೃತ ದೇಹ ಈಗ ಕಿಮ್ಸ್‌ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...