alex Certify ಪ್ರಧಾನಿ ಮೋದಿ ಜೊತೆಗಿನ ಚರ್ಚೆ ಬಳಿಕ ಪ್ರಿಯ ಸಾಥಿ, ಪ್ರಿಯ ಮಿತ್ರ ಎಂದು ಸಂಬೋಧಿಸಿ ಟ್ವೀಟ್‌ ಮಾಡಿದ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಜೊತೆಗಿನ ಚರ್ಚೆ ಬಳಿಕ ಪ್ರಿಯ ಸಾಥಿ, ಪ್ರಿಯ ಮಿತ್ರ ಎಂದು ಸಂಬೋಧಿಸಿ ಟ್ವೀಟ್‌ ಮಾಡಿದ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯಲ್

ಉಭಯ ದೇಶಗಳ ನಡುವಿನ ಬಲವಾದ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ಭಾರತ ಹಾಗೂ ಫ್ರಾನ್ಸ್​ ಇಂಡೋ – ಪೆಸಿಫಿಕ್​ ಪ್ರದೇಶದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ. ಈ ಪ್ರದೇಶವನ್ನು ಸ್ಥಿರವಾಗಿ ಹಾಗೂ ಯಾವುದೇ ಪ್ರಾಬಲ್ಯದಿಂದ ಮುಕ್ತವಾಗಿದೆ ಎಂದು ಭಾರತದ ಫ್ರೆಂಚ್​ ಅಧ್ಯಕ್ಷರ ಕಚೇರಿಯು ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯಲ್​ ಮ್ಯಾಕ್ರನ್​ ದೂರವಾಣಿ ಮೂಲಕ ಇಂಡೋ ಪೆಸಿಫಿಕ್​ ಪ್ರದೇಶದಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಪರಿಶೀಲಿಸಿದರು ಎಂದು ದೆಹಲಿಯ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಮ್ಯಾಕ್ರಾನ್​ ಜೊತೆ ದೂರವಾಣಿ ಮಾತುಕತೆ ಬಳಿಕ ಟ್ವೀಟ್​ ಮಾಡಿದ ಪ್ರಧಾನಿ ಮೋದಿ, ನನ್ನ ಸ್ನೇಹಿತ ಹಾಗೂ ಅಧ್ಯಕ್ಷ ಇಮ್ಯಾನುಯಲ್​ ಮ್ಯಾಕ್ರೋನ್​ ಜೊತೆ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾವು ಇಂಡೋ-ಪೆಸಿಫಿಕ್​ನಲ್ಲಿ ಭಾರತ ಹಾಗೂ ಫ್ರಾನ್ಸ್​ ನಡುವಿನ ನಿಕಟ ಸಂಬಂಧದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಯುಎನ್​ಎಸ್​ಸಿ ಹಾಗೂ ಫ್ರಾನ್ಸ್​ನೊಂದಿಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ ಟ್ವೀಟಾಯಿಸಿದ ಇಮ್ಯಾನುಯಲ್​ ಮ್ಯಾಕ್ರೋನ್​, ನಮಸ್ತೆ ಪ್ರಿಯ ಸಾಥಿ, ನಮಸ್ತೆ ಪ್ರಿಯ ಮಿತ್ರ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಇಂಡೋ ಪೆಸಿಫಿಕ್​​ನ್ನು ಸಹಕಾರ ಹಾಗೂ ಹಂವಿಕೆ ಮೌಲ್ಯದ ಪ್ರದೇಶವನ್ನಾಗಿಸಲು ಎರಡೂ ದೇಶಗಳು ಬಲವಾಗಿ ಬದ್ಧವಾಗಿವೆ ಎಂದು ಮ್ಯಾಕ್ರೋನ್​ ಟ್ವೀಟಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...