
ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ 26 ವರ್ಷದ ವ್ಯಕ್ತಿಯೊಬ್ಬ ತನ್ನ ರೂಂಮೇಟ್ ಆಗಿರುವ 35 ವರ್ಷದ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ಬಿಸಾಡಿ ಬಂದು ಆರಾಮಾಗಿ ಮಲಗಿದ ಘಟನೆ ನಾಗ್ಪುರದಲ್ಲಿ ಜರುಗಿದೆ.
ನಾಗ್ಪುರದ ಢಾಬಾ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ರಾಜು ನಂದೇಶ್ವರ್ ಹಾಗೂ ದೇವಾಂಶ್ ವಾಘೋಡೆ ನಡುವೆ ಶನಿವಾರ ರಾತ್ರಿ ವಾದವೊಂದು ಶುರುವಾಗಿ ಅದು ಜಗಳಕ್ಕೆ ತಿರುಗಿದೆ. ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್‌ಗಳಾಗಿದ್ದ ಇಬ್ಬರೂ ರೂಂ ಒಂದನ್ನು ಜಂಟಿಯಾಗಿ ಬಾಡಿಗೆಗೆ ಪಡೆದಿದ್ದರು.
BIG NEWS: ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದರೂ, ಸಾಯಿಸಿದರೂ ಸುಮ್ಮನಿರಬೇಕಾ…?; ವಿವಾದಾತ್ಮಕ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಈಶ್ವರಪ್ಪ
ನಂದೇಶ್ವರ್ ತಲೆಗೆ ಚೂರಿಯಿಂದ ಇರಿದ ವಾಘೋಡೆ, ಆತನನ್ನು ಸ್ಥಳದಲ್ಲೇ ಕೊಂದು, ಬಳಿಕ ಓಪನ್ ಜಾಗವೊಂದರಲ್ಲಿ ಆತನ ದೇಹವನ್ನು ಬಿಸಾಡಿ ಬಂದು ಮಲಗಿದ್ದಾನೆ. ಬಾಡಿಗೆ ಕೋಣೆಯ ಬಳಿ ಇದ್ದ ಓಪನ್ ಜಾಗದಲ್ಲಿ ಶವವನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವಾಘೋಡೆ ವಿರುದ್ಧ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.