alex Certify ಮಧ್ಯರಾತ್ರಿ ಹಸಿವಾಯ್ತು ಅಂತಾ ಎಚ್ಚರಗೊಂಡ ಯುವತಿ ಅಚಾನಕ್​ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ ಹಸಿವಾಯ್ತು ಅಂತಾ ಎಚ್ಚರಗೊಂಡ ಯುವತಿ ಅಚಾನಕ್​ ಸಾವು..!

ಜೋಧ್​ಪುರದ ಜಾಲಾಮಂಡ್​ ಏರಿಯಾದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹಸಿವಾಗ್ತಿದೆ ಅಂತಾ ತಿಂಡಿ ತಿನ್ನಲು ಹೋದ ಯುವತಿ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ.

ಟೆರೆಸ್​ನಿಂದ ಕೆಳಕ್ಕೆ ಬಿದ್ದು ಗಂಭೀರ ರೂಪದಲ್ಲಿ ಗಾಯಗೊಂಡಿದ್ದ ಯುವತಿಯನ್ನ ಮಥುರಾದಾಸ್​ ಮಾಥುರ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ನ್ಯಾಗಾಲೆಂಡ್​ನ ನಿವಾಸಿಯಾಗಿದ್ದ ಯುವತಿ ಕೆಲವೇ ದಿನಗಳ ಮೊದಲು ತನ್ನ ಸಹೋದರಿ ಮನೆಗೆ ಬಂದಿದ್ದಳು. ಪೊಲೀಸರು ಮೃತಳ ಸಹೋದರಿಯಿಂದ ಹೇಳಿಕೆ ಪಡೆದಿದ್ದಾರೆ. ಇನ್ನು ಈ ಸಂಬಂಧ ಮಾಹಿತಿ ನೀಡಿದ ಕುಡಿ ಠಾಣೆಯ ಉಪನಿರೀಕ್ಷಕ ಸಾಹಬ್​ ಸಿಂಗ್​, ನಾಗಾಲ್ಯಾಂಡ್​ನ ನಿವಾಸಿಯಾಗಿದ್ದ ಮೃತ ಯುವತಿ 20 ವರ್ಷ ಪ್ರಾಯದವಳಾಗಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ತನ್ನ ಹಿರಿಯ ಸಹೋದರಿ ನಿವಾಸಕ್ಕೆ ಆಗಮಿಸಿದ್ದಳು. ರಾತ್ರಿ ಮಲಗಿದ್ದ ವೇಳೆ ಹಸಿವಾಯ್ತು ಅಂತಾ ತಿಂಡಿಯನ್ನ ತಿಂದುಕೊಂಡು ಹಿರಿಯ ಸಹೋದರಿಯನ್ನ ಹುಡುಕುತ್ತಾ ಟೆರೆಸ್​ಗೆ ಬಂದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...