ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಸುದ್ದಿಗೋಷ್ಠಿಯಲ್ಲಿ ಕೋಲಾ ಬಾಟಲಿಯನ್ನ ಸರಿಸಿದ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಯುರೋ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರೊನಾಲ್ಡೋ ಮೇಜಿನ ಮೇಲಿದ್ದ ಎರಡು ಕೋಕ್ ಬಾಟಲಿಯನ್ನ ಸರಿಸಿದ ಬಳಿಕ ಕೋಕ್ ಮಾರುಕಟ್ಟೆಗೆ ನಾಲ್ಕು ಬಿಲಿಯನ್ ನಷ್ಟ ಕೂಡ ಉಂಟಾಗಿದೆ..!
ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ವಿಡಿಯೋವನ್ನ ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡಲಾಗ್ತಿದೆ. ಈ ಟ್ರೋಲ್ ರೇಸ್ನಲ್ಲಿ ಫೇವಿಕಾಲ್ ಕಂಪನಿ ಕೂಡ ಸೇರಿದ್ದು ಟ್ವಿಟರ್ನಲ್ಲಿ ಪೋಸ್ಟ್ ಶೇರ್ ಮಾಡಿದೆ.
ಈ ಪೋಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಬಳಕೆ ಮಾಡಲಾದ ಖುರ್ಚಿ, ಮೇಜು, ಮೈಕ್ ಎಲ್ಲಾ ಇದೆ. ಆದರೆ ರೊನಾಲ್ಡೋ ಕ್ರಿಸ್ಟಿಯಾನೋ ಇಲ್ಲ. ಹಾಗೂ ಕೋಲಾ ಜಾಗದಲ್ಲಿ ಫೆವಿಕಾಲ್ ಬಾಟಲಿಯನ್ನ ಇಡಲಾಗಿದೆ. ಈ ಫೋಟೋಗೆ ಬಾಟಲಿಯನ್ನ ಅಲ್ಲಾಡಿಸಲು ಸಾಧ್ಯವಿಲ್ಲ. ಹಾಗೂ ಮೌಲ್ಯವೂ ಕಡಿಮೆಯಾಗೋದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.