alex Certify ರಾತ್ರಿ ಮೈಸೂರಲ್ಲಿ ನಡೆದಿದೆ ಆಘಾತಕಾರಿ ಘಟನೆ: ವ್ಯಾಪಾರಿ ಅಡ್ಡಗಟ್ಟಿ ಹಲ್ಲೆ -1.8 ಲಕ್ಷ ರೂ. ದರೋಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮೈಸೂರಲ್ಲಿ ನಡೆದಿದೆ ಆಘಾತಕಾರಿ ಘಟನೆ: ವ್ಯಾಪಾರಿ ಅಡ್ಡಗಟ್ಟಿ ಹಲ್ಲೆ -1.8 ಲಕ್ಷ ರೂ. ದರೋಡೆ

ಮೈಸೂರಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಮೈಸೂರಿನ ದಳವಾಯಿ ಶಾಲೆ ಸಮೀಪ ನಡೆದಿದೆ.

ಚಾಮರಾಜ ಮೊಹಲ್ಲಾ ಪ್ರೇಮಕುಮಾರ್ ಅವರ ಬಳಿ ಹಣ ದರೋಡೆ ಮಾಡಲಾಗಿದೆ. ರಾತ್ರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಅವರನ್ನು ಅಂಗಡಿಯಿಂದ ಇಬ್ಬರು ಹಿಂಬಾಲಿಸಿಕೊಂಡು ಬಂದಿದ್ದಾರೆ. ದಳವಾಯಿ ಸಮೀಪ ಅಡ್ಡಹಾಕಿ ಗಲಾಟೆ ಮಾಡಿದ್ದು, ನಮ್ಮ ಮೇಲೆ ಏಕೆ ಉಗಿದೆ ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ದ್ವಿಚಕ್ರವಾಹನದಿಂದ ಕೆಳಗೆ ಬೀಳಿಸಿ ಪ್ರೇಮ್ ಅವರ ಮೇಲೆ ಹಲ್ಲೆ ಮಾಡಿದ್ದು, ಮತ್ತೊಬ್ಬ ಕೀ ತೆಗೆದು ಡಿಕ್ಕಿಯಲ್ಲಿದ್ದ ಹಣ ಕಸಿದು ಪರಾರಿಯಾಗಿದ್ದಾರೆ. ಹಲ್ಲೆ ಹಣ ಕಸಿದುಕೊಂಡು ಪರಾರಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...