alex Certify ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆ; ಅಬ್ಬಿ ಫಾಲ್ಸ್ ಬಳಿ ಚಪ್ಪಲಿ ಪತ್ತೆ; ಎನ್ ಡಿ ಆರ್ ಎಫ್ ನಿಂದ ತೀವ್ರಗೊಂಡ ಶೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆ; ಅಬ್ಬಿ ಫಾಲ್ಸ್ ಬಳಿ ಚಪ್ಪಲಿ ಪತ್ತೆ; ಎನ್ ಡಿ ಆರ್ ಎಫ್ ನಿಂದ ತೀವ್ರಗೊಂಡ ಶೋಧ

ಕೊಡಗು: ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು, ಅಬ್ಬಿ ಜಲಪಾತದ ಬಳಿ ಮಹಿಳೆಯ ಚಪ್ಪಲಿ, ದಾಖಲೆಗಳು ಪತ್ತೆಯಾಗಿರುವುದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ನಿವಾಸಿ ಸರಸ್ವತಿ (33) ನಾಪತ್ತೆಯಾಗಿರುವ ಮಹಿಳೆ. ಸರಸ್ವತಿ ಅವರ ಚಪ್ಪಲಿ ಹಾಗೂ ಕೆಲ ದಾಖಲೆ ಪತ್ರಗಳು ಮಡಿಕೇರಿಯ ಅಬ್ಬಿ ಫಾಲ್ಸ್ ಬಳಿ ಪತ್ತೆಯಾಗಿದೆ. ಜಲಪಾತಕ್ಕೆ ಹಾರಿ ಮಹಿಳೆ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ.

ಜಲಪಾತದ ಬಳಿ ಎನ್ ಡಿ ಆರ್ ಎಫ್ ತಂಡದಿಂದ ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಸರಸ್ವತಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...