ಕೊಡಗು: ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು, ಅಬ್ಬಿ ಜಲಪಾತದ ಬಳಿ ಮಹಿಳೆಯ ಚಪ್ಪಲಿ, ದಾಖಲೆಗಳು ಪತ್ತೆಯಾಗಿರುವುದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ನಿವಾಸಿ ಸರಸ್ವತಿ (33) ನಾಪತ್ತೆಯಾಗಿರುವ ಮಹಿಳೆ. ಸರಸ್ವತಿ ಅವರ ಚಪ್ಪಲಿ ಹಾಗೂ ಕೆಲ ದಾಖಲೆ ಪತ್ರಗಳು ಮಡಿಕೇರಿಯ ಅಬ್ಬಿ ಫಾಲ್ಸ್ ಬಳಿ ಪತ್ತೆಯಾಗಿದೆ. ಜಲಪಾತಕ್ಕೆ ಹಾರಿ ಮಹಿಳೆ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ.
ಜಲಪಾತದ ಬಳಿ ಎನ್ ಡಿ ಆರ್ ಎಫ್ ತಂಡದಿಂದ ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಸರಸ್ವತಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.