alex Certify ಮತ್ತೊಬ್ಬ ಬಿಜೆಪಿ ಶಾಸಕನ ವಿರುದ್ದ ಅತ್ಯಾಚಾರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಬ್ಬ ಬಿಜೆಪಿ ಶಾಸಕನ ವಿರುದ್ದ ಅತ್ಯಾಚಾರ ಆರೋಪ

ಉತ್ತರಾಖಂಡ್​​ನ ಜ್ವಾಲಾಪುರದ ಬಿಜೆಪಿ ಶಾಸಕ ಸುರೇಶ್​ ರಾಥೋರ್​​ಗೆ ಸಂಕಷ್ಟ ಶುರುವಾಗಿದೆ. ಬೇಗಂಪುರ ಗ್ರಾಮದ ನಿವಾಸಿ ಪಕ್ಷದ ಮಹಿಳಾ ಕಾರ್ಯಕರ್ತೆ ಸುರೇಶ್​ ರಾಥೋರ್​ ವಿರುದ್ಧ ಅತ್ಯಾಚಾರದ ಆರೋಪವನ್ನ ಹೊರಿಸಿದ್ದಾರೆ.

ಪ್ರಕರಣ ಸಂಬಂಧ ಮಾತನಾಡಿದ ಹರಿದ್ವಾರ ಎಸ್​ಎಸ್​ಪಿ ಅಬುದೈ ಕೃಷ್ಣರಾಜ್​, ಪ್ರಕರಣ ಸಂಬಂಧ ಕೋರ್ಟ್​ನ ಸೂಚನೆಯಂತೆ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್​​ 156(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಮಾತ್ರವಲ್ಲದೇ ಐಪಿಸಿ ಸೆಕ್ಷನ್​ 376, 504, 506ರ ಅಡಿಯಲ್ಲಿಯೂ ಕೇಸ್​ ದಾಖಲಿಸಲಾಗಿದೆ ಎಂದು ಹೇಳಿದ್ರು.

ಕೆಲವು ತಿಂಗಳ ಹಿಂದೆ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಹಾಗೂ ಈ ವಿಚಾರವನ್ನ ಯಾರಿಗೂ ಹೇಳದಂತೆ ನನಗೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

ಆದರೆ ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿರುವ ಬಿಜೆಪಿ ಶಾಸಕ ನನ್ನ ಜೀವ ಅಪಾಯದಲ್ಲಿದ್ದು ನನಗೆ ಪೊಲೀಸ್​ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ನಾನು ಅಪಾಯದಲ್ಲಿದ್ದೇನೆ. ನಾನು ಇದನ್ನ ಈ ಹಿಂದೆ ಕೂಡ ಹೇಳಿದ್ದೆ. ಸುಲಿಗೆ ಆರೋಪದಡಿಯಲ್ಲಿ ಜೈಲಿಗೆ ಹೋಗಿಬಂದವರು ಈಗ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಹೊರಿಸಲಾಗ್ತಾ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಾನು ಪೊಲೀಸರಲ್ಲಿ ಮನವಿ ಮಾಡುತ್ತಿದ್ದೇನೆ. ಕೂಡಲೇ ಸತ್ಯ ಬಹಿರಂಗ ಮಾಡಿ ಎಂದು ರಾಥೋಡ್​ ಹೇಳಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಶಾಸಕ ರಾಥೋಡ್​ ಹಾಗೂ ಮಹಿಳೆ ಕಳೆದ ಎರಡೂವರೆ ವರ್ಷಗಳಿಂದ ಒಬ್ಬರನ್ನೊಬ್ಬರು ಬಲ್ಲವರಾಗಿದ್ದರು. ಬಳಿಕ ರಾಥೋಡ್​​ರೇ ಈಕೆಯನ್ನ ಬಿಜೆಪಿ ಮಹಿಳಾ ಮೋರ್ಛಾಗೆ ಸೇರ್ಪಡೆಯಾಗುವಂತೆ ಹೇಳಿದ್ದರು. ಈ ಹಿಂದೆ ಜ್ವಾಲಾಪುರ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಈ ಮಹಿಳೆ ಇದೀಗ ಶಾಸಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...