alex Certify ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಕಾರಣ ಹೇಳಿದ ಸಚಿನ್ ತೆಂಡೂಲ್ಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಕಾರಣ ಹೇಳಿದ ಸಚಿನ್ ತೆಂಡೂಲ್ಕರ್

ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಜೀವನದಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ಕಾರಣವೇನು ಎಂಬುದನ್ನ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಬಾಯಿ ನೈರ್ಮಲ್ಯದ ಕುರಿತು ನಡೆಸುತ್ತಿರುವ ಸ್ವಚ್ಛ್ ಮುಖ್ ಅಭಿಯಾನದ (ಎಸ್‌ಎಂಎ) “ಸ್ಮೈಲ್ ಅಂಬಾಸಿಡರ್” ಆಗಿ ನೇಮಕವಾದ ನಂತರ ಈ ಬಗ್ಗೆ ಮಾತನಾಡಿದರು.

ನಾನು ಭಾರತಕ್ಕಾಗಿ ಆಡಲು ಪ್ರಾರಂಭಿಸಿದಾಗ ನಾನು ಶಾಲೆಯಿಂದ ಹೊರಬಂದಿದ್ದೆ. ಆಗ ನನಗೆ ಅನೇಕ ಜಾಹೀರಾತುಗಳ ಆಫರ್ ಬಂದವು. ಆದರೆ ನನ್ನ ತಂದೆ ನನಗೆ ಎಂದಿಗೂ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಬೇಡ ಎಂದು ಹೇಳಿದರು. ನಾನು ಅಂತಹ ಅನೇಕ ಆಫರ್ ಪಡೆದಿದ್ದೇನೆ ಆದರೆ ಅವುಗಳಲ್ಲಿ ಯಾವುದನ್ನೂ ಸ್ವೀಕರಿಸಲಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ಸ್ವಚ್ಛ್ ಮುಖ್ ಅಭಿಯಾನದ (ಎಸ್‌ಎಂಎ) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿನ್ ಗುರಿಗಳನ್ನು ಸಾಧಿಸಲು ಫಿಟ್‌ನೆಸ್ ಬಗ್ಗೆ ಅರಿವು ಮತ್ತು ಶಿಸ್ತು ಬಹಳ ಮುಖ್ಯ ಎಂದು ಫಿಟ್ ನೆಸ್ ಮಹತ್ವದ ಬಗ್ಗೆ ಹೇಳಿದರು.

ನಾನು ಬಾಲ್ಯದಲ್ಲಿ ಬಹಳಷ್ಟು ಆಡುತ್ತಿದ್ದೆ, ಆದರೆ ಕ್ರಿಕೆಟ್‌ಗೆ ಆಕರ್ಷಿತನಾಗಿದ್ದೆ. ನಾನು ಬೆಳೆದಂತೆ ನೀವು ಫಿಟ್ ಆಗಿಲ್ಲವೆಂದರೆ ನಿಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡಾಗಿನಿಂದ ನನ್ನ ಫಿಟ್‌ನೆಸ್ ಶಿಸ್ತಿನ ಅಗತ್ಯದ ಬಗ್ಗೆ ನನಗೆ ಹೆಚ್ಚು ಅರಿವಾಯಿತು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದರು.

ಶೇಕಡ 50 ರಷ್ಟು ಮಕ್ಕಳು ಬಾಯಿಯ ಕಾಯಿಲೆಗಳನ್ನು ಹೊಂದಿದ್ದಾರೆ ಮತ್ತು ಅದು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ವಿಷಯವು ಅವರ ಆತ್ಮವಿಶ್ವಾಸವನ್ನು ಹಾಳುಮಾಡುತ್ತದೆ ಎಂದು ಅವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...