alex Certify ಹಮಾಸ್​ ಉಗ್ರರು ಅರೆಬೆತ್ತಲೆ ಮೆರವಣಿಗೆ ನಡೆಸಿದ್ದ 22 ವರ್ಷದ ಯುವತಿ ಶಾನಿ ಲೌಕ್​ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಮಾಸ್​ ಉಗ್ರರು ಅರೆಬೆತ್ತಲೆ ಮೆರವಣಿಗೆ ನಡೆಸಿದ್ದ 22 ವರ್ಷದ ಯುವತಿ ಶಾನಿ ಲೌಕ್​ ಸಾವು

ಹಮಾಸ್​ ಉಗ್ರರು ಅಕ್ಟೋಬರ್​ 7ರಂದು ನಡೆಸಿದ ದಾಳಿಯ ಸಂದರ್ಭದಲ್ಲಿ ಗಾಜಾ ಪಟ್ಟಿಗೆ ಅಪಹರಿಸಲಾಗಿದ್ದ ಜರ್ಮನ್​ – ಇಸ್ರೇಲಿ ಮಹಿಳೆ ಶಾನಿ ಲೌಕ್​ ಕುಟುಂಬಕ್ಕೆ ಅವರ ಸಾವಿನ ವಿಚಾರವನ್ನು ತಿಳಿಸಿದೆ.

ದುರಾದೃಷ್ಟವಶಾತ್​ ನನ್ನ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ. ಈ ಸುದ್ದಿಯನ್ನು ನಾವು ನಿನ್ನೆ ಸ್ವೀಕರಿಸಿದ್ದೇವೆ ಎಂದು ಲೌಕ್​ ತಾಯಿ ರಿಕಾರ್ಡಾ ಜರ್ಮನ್​ನ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

22 ವರ್ಷದ ಮೃತ ಶಾನಿ ಲೌಕ್​ ಗಾಜಾ ಗಡಿಯಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸ್ಥಳವು ಹಮಾಸ್​ ಉಗ್ರರಿಂದ ದಾಳಿಗೆ ಒಳಗಾದ ಇಸ್ರೇಲ್​ನ ಮೊದಲ ತಾಣವಾಗಿತ್ತು. ಪ್ಯಾಲೆಸ್ಟೇನಿಯನ್​ ಉಡುಪು ಧರಿಸಿದ್ದ ಜನರು ಗುಂಪು ಸಂಗೀತ ಉತ್ಸವದಲ್ಲಿದ್ದ ಅನೇಕರ ಅಪಹರಣ ಮಾಡಿದ್ದು ಇದರಲ್ಲಿ ಶಾನಿ ಕೂಡ ಒಬ್ಬರು.

ಶಾನಿ ಲೌಕ್​ ತಾಯಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದಲ್ಲಿ ಅರಬೆತ್ತಲೆ ಸ್ಥಿತಿಯಲ್ಲಿದ್ದ ತನ್ನ ಮಗಳನ್ನು ಗುರುತಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಶಾನಿ ಲೌಕ್​ ದೇಹದಲ್ಲಿದ್ದ ಟ್ಯಾಟೂ ಹಾಗೂ ಆಕೆಯ ಕೂದಲಿನ ಬಣ್ಣವನ್ನು ತಾಯಿ ಗುರುತಿಸಿದ್ದರು ಎನ್ನಲಾಗಿದೆ. ಶಾನಿ ಲೌಕ್​ ತಾಯಿ ನೋಡಿದ ವಿಡಿಯೋದಲ್ಲಿ ಗಾಜಾದಲ್ಲಿ ಶಸ್ತ್ರಸಜ್ಜಿತ ಪುರುಷರಿಂದ ತುಂಬಿದ್ದ ಪಿಕಪ್​ ಟ್ರಕ್​ನ ಹಿಂಭಾಗದಲ್ಲಿ ಶಾನಿ ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು.

ಗಾಜಾ ಪಟ್ಟಿಯ ಗಡಿ ಭಾಗದಲ್ಲಿರುವ ಮರುಭೂಮಿ ಪ್ರದೇಶದಲ್ಲಿ ಭಯೋತ್ಪಾದಕರು ರೇವ್​ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು ಇಲ್ಲಿಂದ ಶಾನಿ ಲೌಕ್​ಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಲೌಕ್​ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದ್ದರೂ ಸಹ ಆಕೆಯ ದೇಹವನ್ನು ಇಂದಿಗೂ ಹಿಂದಿರುಗಿಸಿಲ್ಲ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...