alex Certify ’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ.

ಆದರೆ ಇಲ್ಲೊಬ್ಬ ಶಾಖಾಹಾರಿ ಪತಿ ತನ್ನ ಪತ್ನಿ ತನಗೆ ಗೊತ್ತಾಗದಂತೆ ಮಾಂಸಾಹಾರ ಸೇವನೆ ಮಾಡುತ್ತಿರುವ ವಿಚಾರ ತಿಳಿದು, ಅದಕ್ಕೆ ಮುನಿಸಿಕೊಂಡು ಅಳಲು ತೋಡಿಕೊಂಡಿದ್ದಾನೆ. ಈ ವಿಚಾರ ಪ್ರಕಟವಾದ ಸುದ್ದಿಪತ್ರಿಕೆಯೊಂದರ ಕ್ಲಿಪ್ಪಿಂಗ್‌ ವೈರಲ್ ಆಗಿದೆ.

ಮದುವೆಗೂ ಮುನ್ನ ತನ್ನಾಕೆಗೆ ಮಾಂಸಾಹಾರ ಸೇವನೆ ಮೇಲಿದ್ದ ಪ್ರೀತಿಯ ಬಗ್ಗೆ ತಿಳಿದಿದ್ದರೂ ಸಹ, ಮದುವೆ ಆದ ಮೇಲೆ ಮಾಂಸ ಸೇವನೆ ಮಾಡುವುದಿಲ್ಲ ಎಂದು ಆಕೆ ಮಾತು ಕೊಟ್ಟ ಬಳಿಕ ಆಕೆಯನ್ನು ವರಿಸಿದ್ದಾನೆ ಈತ. ಆದರೆ ತನ್ನ ಸಂಗಾತಿ ರಹಸ್ಯವಾಗಿ ಮಾಂಸ ತಿನ್ನುತ್ತಾಳೆ ಎಂಬ ವಿಷಯವನ್ನು ಈ ಪತಿರಾಯ ಕಂಡುಕೊಂಡಿದ್ದಾನೆ.

“ಆಕೆ ಬಹಳ ಸುಂದರವಾಗಿದ್ದ ಕಾರಣ, ಮಾಂಸಾಹಾರ ವರ್ಜಿಸಬೇಕೆಂಬ ಒಂದು ಷರತ್ತಿನ ಮೇಲೆ ಆಕೆಯನ್ನು ಮದುವೆಯಾಗಲು ಒಪ್ಪಿಕೊಂಡೆ. ಆದರೆ ತನಗೆ ಮಟನ್ ಎಂದರೆ ಇಷ್ಟವೆನ್ನುವ ಈಕೆ, ಅದನ್ನು ತಿನ್ನದೇ ಬದುಕಿರಲಾರೆ ಎನ್ನುತ್ತಿದ್ದಾಳೆ,” ಎಂದು ಕಟ್ಟಿಕೊಂಡ ಪತ್ನಿಯ ಮೇಲೆ ದೂರುತ್ತಾ ಸಾಗುವ ಈತ, “ಮಟನ್ ಬೇಕೋ ಇಲ್ಲ ನಾನು ಬೇಕೋ,” ಎಂಬ ಪ್ರಶ್ನೆಯನ್ನು ತನ್ನ ಮಡದಿ ಮುಂದೆ ಇಟ್ಟಿರುವುದಾಗಿ ಹೇಳಿಕೊಂಡಿದ್ದಾನೆ.

ಇದೇ ವೇಳೆ, ತನ್ನ ಮಡದಿ ತನಗಿಂತ ಮಟನ್‌ ಅನ್ನೇ ಆಯ್ಕೆ ಮಾಡಿಕೊಳ್ಳುವ ಭಯ ತನಗೆ ಇರುವುದಾಗಿ ಈ ಪತಿರಾಯ ತನ್ನ ಆತಂಕವನ್ನು ಅಂಕಣಕಾರರೊಂದಿಗೆ ಹೇಳಿಕೊಂಡಿದ್ದಾನೆ. ಈ ಕುರಿತು ಅಂಕಣಕಾರನ ಪ್ರತಿಕ್ರಿಯೆ ಏನಿದೆ ಎಂಬುದು ಕ್ಲಿಪ್ಪಿಂಗ್‌ನಲ್ಲಿ ಕಂಡು ಬಂದಿಲ್ಲ.

ಈತನ ಪರಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಫನ್ನಿ ಕಾಮೆಂಟ್‌ಗಳಿಗೆ ಗ್ರಾಸವಾಗಿದೆ.

— ParanjoyGuhaThakurta (@paranjoygt) December 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...