ಬಿಲ್ಡರ್ ಮಾಫಿಯಾ ಒಂದು ಹಿಂದೂ ದೇವಾಲಯ ಕೆಡವುತ್ತಿರುವುದಕ್ಕೆ ತಡೆಯಾಜ್ಞೆ ನೀಡಲು ಕೋರಿ ದೆಹಲಿಯ ಜಾಮಿಯಾ ನಗರದ ಮುಸ್ಲಿಮರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಲ್ಲಿನ ನೂರ್ ನಗರ ಪ್ರದೇಶದಲ್ಲಿರುವ ಹಿಂದೂ ದೇವಾಲಯ ಕೆಡವುದರಿಂದ ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಇರುವುದಲ್ಲದೇ, ದೇವಾಲಯದ ಭೂಮಿಯನ್ನು ಅಕ್ರಮವಾಗಿ ವಶ ಪಡಿಸಿಕೊಳ್ಳುವ ಯತ್ನಗಳು ಸಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜಾಮಿಯಾ ನಗರದ 206ನೇ ವಾರ್ಡ್ ಸಮಿತಿ ಸಲ್ಲಿಸಿರುವ ಅರ್ಜಿಯಲ್ಲಿ, “ದೇವಾಲಯದ ಧರ್ಮಶಾಲೆಯನ್ನು ಆಹೋರಾತ್ರಿ ಕೆಡವಲಾಗಿದ್ದು, ಇಡೀ ಪ್ರದೇಶವನ್ನೂ ಸಮತಟ್ಟುಗೊಳಿಸಿರುವ ಕಾರಣ ಇದೇ ಜಾಗವನ್ನು ಬಿಲ್ಡರ್‌ಗಳು ಅತಿಕ್ರಮಿಸಲು ಅನುವು ಮಾಡಲಾಗಿದೆ,” ಎಂದು ದೂರಿದ್ದಾರೆ.
ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಬಿಲ್ಡರ್
ಹೈಕೋರ್ಟ್ ಪೀಠದ ನ್ಯಾಯಾಧೀಶ ಸಂಜೀವ್ ಸಚ್‌ದೇವ ಸೆಪ್ಟೆಂಬರ್ 24ರಂದು ಆದೇಶ ಹೊರಡಿಸಿ, “ಮಂದಿರಕ್ಕೆ ಸೇರಿದ್ದು ಎಂದು ತೋರಲಾದ
ಮೇಲ್ಕಂಡ ಪ್ರದೇಶದಲ್ಲಿ ಯಾವುದೇ ರೀತಿಯ ಅತಿಕ್ರಮಣ ಆಗದಂತೆ ಪೊಲೀಸರು ಖಾತ್ರಿ ಪಡಿಸಲಿದ್ದಾರೆ ಹಾಗೂ ಲೇಔಟ್ ನಕ್ಷೆಯನ್ನು ಸಂರಕ್ಷಿಸಲಾಗುತ್ತದೆ. ಜೊತೆಗೆ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಹ ಪೊಲೀಸರು ಖಾತ್ರಿ ಪಡಿಸಲಿದ್ದಾರೆ,” ಎಂದಿದ್ದಾರೆ.
1970ರಲ್ಲೇ ನಿರ್ಮಾಣವಾದ ಮಂದಿರವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳಲ್ಲಿ ಗುರುತಿಸಲಾಗಿದೆ ಎಂದು ಪ್ರದೇಶದ ನಿವಾಸಿಗಳು ತಿಳಿಸಿದ್ದಾರೆ.
“1970ರಲ್ಲಿ ನಿರ್ಮಾಣವಾದಾಗಿನಿಂದಲೂ ದೇಗುಲದಲ್ಲಿ ಯಾವುದೇ ಅಡಚಣೆಗಳಿಲ್ಲದೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಪೂಜೆ ಹಾಗೂ ಧಾರ್ಮಿಕ ಕ್ರಿಯೆಗಳಿಗೆಂದು ದೇಗುಲದಲ್ಲಿ 8-10 ಮೂರ್ತಿಗಳಿದ್ದು, ಇವುಗಳನ್ನು ಈಗ ಯಾರೋ ದುಷ್ಕರ್ಮಿಗಳು ತೆರವುಗೊಳಿಸಿದ್ದಾರೆ,” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.