alex Certify ಮಿಲಿಟರಿ ತರಬೇತಿಯಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪನೆಗೆ ಕಾಂಗ್ರೆಸ್​ ವಿರೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಲಿಟರಿ ತರಬೇತಿಯಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪನೆಗೆ ಕಾಂಗ್ರೆಸ್​ ವಿರೋಧ

ಭಗವದ್ಗೀತೆ ಹಾಗೂ ಕೌಟಿಲ್ಯ ಅರ್ಥಶಾಸ್ತ್ರವನ್ನು ಭಾರತೀಯ ಸೇನೆಯ ತರಬೇತಿ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾವನೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ. ಭಾರತೀಯ ಸೇನೆಯಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದೆ.

ಸೇನೆ ವಿಚಾರದಲ್ಲಿ ಆದರೂ ಸರ್ಕಾರ ರಾಜಕೀಯ ಮಾಡುವುದನ್ನು ಬಿಡಬೇಕು. ಕಾರ್ಗಿಲ್​ ಯುದ್ಧವನ್ನು ನಾವು ಮುಸ್ಲಿಂ ಯೋಧರ ಸಹಾಯದಿಂದ ಗೆದ್ದಿದ್ದೇವೆ ಎಂದು ಕಾಂಗ್ರೆಸ್​ ವಕ್ತಾರ ಕೆ.ಕೆ. ಮಿಶ್ರಾ ಹೇಳಿದ್ದಾರೆ.

ಡಿಫೆನ್ಸ್​ ಮ್ಯಾನೇಜ್​ಮೆಂಟ್​ ಕಾಲೇಜು ಇತ್ತೀಚಿಗೆ ನಡೆಸಿದ ಆಂತರಿಕ ಅಧ್ಯಯನದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಭಗವದ್ಗೀತೆಯನ್ನು ಮಿಲಿಟರಿ ತರಬೇತಿ ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಶಿಫಾರಸ್ಸು ಮಾಡಿದ ಬಳಿಕ ಕಾಂಗ್ರೆಸ್​ ಈ ರೀತಿ ಟೀಕೆ ಮಾಡಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಮಾಡಲು ಭಾರತೀಯ ಸಂಸ್ಕೃತಿ ಅಧ್ಯಯನ ವೇದಿಕೆ ನಿರ್ಮಿಸುವಂತೆ ಸಲಹೆ ನೀಡಿದೆ.

ತೆಲಂಗಾಣದ ಸಿಕಂದರಾಬಾದ್ ​ನಲ್ಲಿರುವ ಸಿಡಿಎಂ ಟ್ರೈ ಸರ್ವೀಸ್​ ಮಿಲಿಟರಿ ತರಬೇತಿ ಸಂಸ್ಥೆಯಾಗಿದೆ. ಇಲ್ಲಿ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ಯುದ್ಧ ತಂತ್ರಗಳ ಗುಣಲಕ್ಷಣ ಹಾಗೂ ಇಂದಿನ ಕಾರ್ಯತಂತ್ರದ ಜೊತೆ ಸಂಯೋಜನೆ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...