ಕೋಮು ಸೌಹಾರ್ದದ ನಿದರ್ಶನವೊಂದರಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯವೊಂದಕ್ಕೆ ಗೋವನ್ನು ನೀಡಿದ ಘಟನೆ ಅಸ್ಸಾಂ ಶಿವಸಾಗರ ಜಿಲ್ಲೆಯಲ್ಲಿ ಜರುಗಿದೆ.
ಶಿವ ಡೋಲ್ ದೇಗುಲಕ್ಕೆ ಗೋವನ್ನು ನೀಡಿದ ಖಲೀಲುರ್ ರಹಮಾನ್ ಹಜ಼ಾರಿಕಾ ತಮ್ಮ ಪುತ್ರಿ ಆ ಹಸುವನ್ನು ಚಿಕ್ಕಂದಿನಿಂದಲೂ ಸಾಕಿ ಸಲಹಿದ್ದಾಗಿ ತಿಳಿಸಿದ್ದಾರೆ.
ಅಹೋಂದ ರಾಜ್ಯಭಾರದ ದಿನಗಳಲ್ಲಿ ಮಹಾಪುರುಷ್ ಶ್ರೀಮಂತಾ ಶಂಕರದೇವ್ ಹಾಗೂ ಆಜ಼ಾನ್ ಫಕೀರರು ಮಾನವೀಯ ತತ್ವಾದರ್ಶಗಳ ಮೇಲೆ ಈ ಐತಿಹಾಸಿಕ ಸ್ಥಳವನ್ನು ರಚಿಸಿದ್ದಾರೆ. 104 ಅಡಿ ಎತ್ತರವಿರುವ ದೇಗುಲದ ಕೇಂದ್ರ ಸ್ಥಾವರವು ದೇಶದಲ್ಲಿರುವ ಶಿವ ದೇಗುಲಗಳಲ್ಲೇ ಅತ್ಯಂತ ಎತ್ತರ ಸ್ಥಾವರವಾಗಿರುವ ಪೈಕಿ ಒಂದು ಎನ್ನಲಾಗಿದೆ.
ಈ ಹಸು ಬಿಸ್ಕಿಟ್‌ಗಳನ್ನು ಇಷ್ಟ ಪಡುತ್ತಿದ್ದ ಕಾರಣ ಅದಕ್ಕೆ ’ಬಿಸ್ಕಿಟ್’ ಎಂದೇ ಹೆಸರಿಟ್ಟಿದ್ದಾಗಿ ಖಲೀಲುರ್ ತಿಳಿಸಿದ್ದಾರೆ. “ಇದು ಅಸ್ಸಾಮೀ ಹೊಸ ವರ್ಷದ ಮೊದಲ ಸೋಮವಾರವಾಗಿದೆ. ದೇವರ ಮುಂದೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲರ ಒಳಿತು ಬಯಸಿ ಪ್ರಾರ್ಥಿಸಲು ಈ ಮುಸ್ಲಿಂ ವ್ಯಕ್ತಿ ನನ್ನಲ್ಲಿ ಕೇಳಿಕೊಂಡಿದ್ದಾರೆ,” ಎಂದು ಶಿವ ಡೋಲ್‌ನ ಅರ್ಚಕ ಸುರೇಶ್ ಬೊರ್ತಾಕುರ್ ತಿಳಿಸಿದ್ದಾರೆ.
ಶಿವ ಡೋಲ್‌ನಲ್ಲಿ ಮೂರು ಹಿಂದೂ ದೇವಾಲಯಗಳಿವೆ – ಶಿವಡೋಲ್, ವಿಷ್ಣುಡೋಲ್ ಹಾಗೂ ದೇವಿಡೋಲ್ ದೇಗುಲಗಳು. ಜೊತೆಗೆ ಒಂದು ವಸ್ತು ಸಂಗ್ರಹಾಲಯವೂ ಇದೆ.