alex Certify ಡ್ಯೂಟಿಯಿಂದ ಮನೆಗೆ ಬಂದ ಪತಿಗೆ ಬಿಗ್ ಶಾಕ್: ರಕ್ತದ ಮಡುವಿನಲ್ಲಿ ಪತ್ನಿ, ಮಗು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯೂಟಿಯಿಂದ ಮನೆಗೆ ಬಂದ ಪತಿಗೆ ಬಿಗ್ ಶಾಕ್: ರಕ್ತದ ಮಡುವಿನಲ್ಲಿ ಪತ್ನಿ, ಮಗು ನಾಪತ್ತೆ

ಬೆಂಗಳೂರು: ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಅಪಹರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಕೋಳೂರು ಗ್ರಾಮದ ನಿವಾಸಿಯಾಗಿರುವ ಭಾರತಿ(27) ಕೊಲೆಯಾದ ಗೃಹಿಣಿ ಎಂದು ಹೇಳಲಾಗಿದೆ. ಪತಿ ಮನೆಗೆ ಬಂದಾಗ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ದಂಪತಿಗೆ ಇದ್ದ 5 ವರ್ಷದ ಮಗು ನಾಪತ್ತೆಯಾಗಿತ್ತು. ಕಳೆದ ರಾತ್ರಿ ಮನೆಗೆ ನುಗ್ಗಿ ಪ್ರಿಯಕರ ಹರೀಶ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...