ಬೆಂಗಳೂರು: ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಅಪಹರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.
ಕೋಳೂರು ಗ್ರಾಮದ ನಿವಾಸಿಯಾಗಿರುವ ಭಾರತಿ(27) ಕೊಲೆಯಾದ ಗೃಹಿಣಿ ಎಂದು ಹೇಳಲಾಗಿದೆ. ಪತಿ ಮನೆಗೆ ಬಂದಾಗ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ದಂಪತಿಗೆ ಇದ್ದ 5 ವರ್ಷದ ಮಗು ನಾಪತ್ತೆಯಾಗಿತ್ತು. ಕಳೆದ ರಾತ್ರಿ ಮನೆಗೆ ನುಗ್ಗಿ ಪ್ರಿಯಕರ ಹರೀಶ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.