alex Certify ಅಕ್ರಮ ಸಂಬಂಧ ಬಿಡಲೊಪ್ಪದ ಅಳಿಯನ ಮರ್ಮಾಂಗಕ್ಕೆ ಒದ್ದು ಉಸಿರು ನಿಲ್ಲಿಸಿದ ಮಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಬಿಡಲೊಪ್ಪದ ಅಳಿಯನ ಮರ್ಮಾಂಗಕ್ಕೆ ಒದ್ದು ಉಸಿರು ನಿಲ್ಲಿಸಿದ ಮಾವ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕರಿಶೆಟ್ಟಿಹಳ್ಳಿ ಸಮೀಪ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಚೌಕೇನಹಳ್ಳಿ ಮೂಡ್ಲಯ್ಯ(40) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಆತನ ಮಾವ ಮತ್ತು ಬಾಮೈದುನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ರಸ್ತೆಬದಿಯಲ್ಲಿ ಮೃತದೇಹ ಎಸೆದು ಹೋಗಿದ್ದಾರೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣವೆಂದು ಹೇಳಲಾಗಿದೆ.

ಆರು ವರ್ಷದ ಹಿಂದೆ ಮೂಡ್ಲಯ್ಯನಿಗೆ ಜಯಣ್ಣ ಅವರ ಪುತ್ರಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಬೇರೆ ಮಹಿಳೆಯೊಂದಿಗೆ ಮೂಡ್ಲಯ್ಯ ಅಕ್ರಮ ಸಂಬಂಧ ಬೆಳೆಸಿದ್ದು, ಆತನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದರೂ ಕೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜಯಣ್ಣ ಮಗನೊಂದಿಗೆ ಸೇರಿ ಮೂಡ್ಲಯ್ಯನನ್ನು ಕೊಲೆ ಮಾಡಿದ್ದಾನೆ.

ಸೋಮವಾರ ತಡರಾತ್ರಿ ಬೈಕ್ ನಲ್ಲಿ ಬರುತ್ತಿದ್ದ ಮೂಡ್ಲಯ್ಯನನ್ನು ತಡೆದು ನಡುರಸ್ತೆಯಲ್ಲೇ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಮೃತದೇಹ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಜಯಣ್ಣ ಹಾಗೂ ಆತನ ಪುತ್ರ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...