alex Certify ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್).

ಪ್ರಯಾಣಿಕರಿಗೆ ಪ್ರಯಾಣದ ವೇಳೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಬೆಸ್ಟ್‌ ಈ ನಿರ್ಧಾರಕ್ಕೆ ಬಂದಿದೆ. ಪ್ರಯಾಣಿಕರಿಂದ ನಿರಂತರವಾಗಿ ಈ ಸಂಬಂಧ ಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬೆಸ್ಟ್ ವಕ್ತಾರ ತಿಳಿಸಿದ್ದಾರೆ.

ಸುಮಾರು 3,400ರಷ್ಟು ಬಸ್ಸುಗಳನ್ನು ಹೊಂದಿರುವ ಬೆಸ್ಟ್, ಥಾಣೆ, ನವಿ ಮುಂಬಯಿ ಹಾಗೂ ಮಿರಾ-ಬಯಾಂದರ್‌ ಪ್ರದೇಶದಲ್ಲಿ ಪ್ರತಿನಿತ್ಯ 30 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ರವಾನೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...