alex Certify ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ವ್ಯಕ್ತಿಯಿಂದ ಹಣ ವಸೂಲಿಗಿಳಿದ ಚಾಲಾಕಿ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ವ್ಯಕ್ತಿಯಿಂದ ಹಣ ವಸೂಲಿಗಿಳಿದ ಚಾಲಾಕಿ ಮಹಿಳೆ….!

ಮಹಿಳೆಯೊಬ್ಬಳು ತನ್ನದೇ ಅಶ್ಲೀಲ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿ ಹಣವನ್ನು ಪೀಕಲು ಪ್ಲ್ಯಾನ್ ಮಾಡಿದ ಘಟನೆ ಮಥುರಾದಲ್ಲಿ ನಡೆದಿದೆ.

ಈ ಚಾಲಕಿ ಮಹಿಳೆಯು ಒಬ್ಬ ವ್ಯಕ್ತಿಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ. ತದನಂತರ ಆತನಿಂದ ವಾಟ್ಸಾಪ್ ನಂಬರ್ ಅನ್ನು ತೆಗೆದುಕೊಂಡು ಚಾಟ್ ಮಾಡಿದ್ದಾರೆ. ಒಂದು ದಿನ ವಾಟ್ಸಾಪ್ ವಿಡಿಯೋ ಕರೆ ಮಾಡಿದ್ದಾಳೆ. ಆತ ಕರೆ ಸ್ವೀಕರಿಸಿದಾಗ ಆಕೆ ನಗ್ನಳಾಗಿರುವುದು ತಿಳಿದು ಬಂದಿದೆ. ಬಳಿಕ ಆಕೆ ವ್ಯಕ್ತಿಗೆ ಗೊತ್ತಾಗದಂತೆ ಮಾತನಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.

BREAKING: ‘ಆಯುಷ್ಮಾನ್’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಹೆಚ್ಚುವರಿ ಉನ್ನತ ಚಿಕಿತ್ಸೆಗೆ ‘ರೆಫರಲ್ ವ್ಯವಸ್ಥೆ’ ಜಾರಿ

ನಂತರ ಈ ವಿಡಿಯೋವನ್ನು ಬಳಸಿಕೊಂಡು 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡಿದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾಳೆ. ಮಹಿಳೆಯು ಮೊದಲು 5 ಸಾವಿರ ಕೇಳಿದ್ದಾಳೆ. ಪುನಃ 5 ಸಾವಿರ ಕೇಳಿದ್ದಾಳೆ.

ಇದರಿಂದ ಬೇಸತ್ತ ಆ ವ್ಯಕ್ತಿ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...