alex Certify ಕಾಮದ ಮದದಲ್ಲಿ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನೊಂದಿಗೆ ಸೇರಿ ಬೆಡ್ರೂಮ್ ನಲ್ಲೇ ಪತಿ ಕೊಂದು ಬೆಂಕಿ ಹಚ್ಚಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದ ಮದದಲ್ಲಿ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನೊಂದಿಗೆ ಸೇರಿ ಬೆಡ್ರೂಮ್ ನಲ್ಲೇ ಪತಿ ಕೊಂದು ಬೆಂಕಿ ಹಚ್ಚಿದ ಪತ್ನಿ

ಮುಂಬೈ: ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿ ಬೆಡ್ರೂಮ್ ನಲ್ಲಿ ಸುಟ್ಟು ಹಾಕಿದ ಘಟನೆ ಪಶ್ಚಿಮ ಮುಂಬೈ ಉಪ ನಗರದಲ್ಲಿ ನಡೆದಿದೆ.

ದಹಿಸರ್‌ನ(ಪೂರ್ವ) ರಾವಲ್ ಪಾಡಾ ಪ್ರದೇಶದ ನಿವಾಸಿ 28 ವರ್ಷದ ರಶೀದಾ ಶೇಖ್ ಕೊಲೆ ಆರೋಪಿಯಾಗಿದ್ದಾಳೆ. ರಯೀಶ್ ಶೇಖ್ ಜೊತೆಗೆ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ರಶೀದಾ ಹಾಗೂ ಅಮಿತ್ ಮಿಶ್ರಾ ಎಂಬವನೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಗಂಡನನ್ನೇ ಕೊಲೆ ಮಾಡಲು ರಶೀದಾ ಸಂಚು ರೂಪಿಸಿದ್ದಾಳೆ. 12 ದಿನಗಳ ಹಿಂದೆ ಪ್ರಿಯಕರನೊಂದಿಗೆ ಸೇರಿ ಮಕ್ಕಳ ಎದುರಲ್ಲೇ ಗಂಡನನ್ನು ಕೊಲೆ ಮಾಡಿದ್ದಾಳೆ. ಮಲಗುವ ಕೋಣೆಯಲ್ಲೇ ಬೆಂಕಿ ಹಚ್ಚಿ ಮೃತದೇಹ ಸುಟ್ಟಿದ್ದಾಳೆ. ರಯೀಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಬಾರದ ಕಾರಣ ಅಂಗಡಿಯವರು ಹುಡುಕಿದ್ದಾರೆ. ಮೃತನ ಪತ್ನಿ ತನ್ನ ಗಂಡ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ತನಿಖೆಗಾಗಿ ಮನೆಗೆ ಬಂದ ಪೊಲೀಸರು ಬೆಡ್ರೂಮ್ ನಲ್ಲಿ ಟೈಲ್ಸ್ ಹಾಳಾಗುತ್ತಿರುವುದು ಮತ್ತು ಸುಟ್ಟ ಗುರುತುಗಳನ್ನು ಕಂಡು ರಶೀದಾ ವಿಚಾರಣೆ ನಡೆಸಿದ್ದಾರೆ. ಆಗ ಅನುಮಾನದ ಮೇಲೆ ತನಿಖೆ ಚುರುಕುಗೊಳಿಸಿದಾಗ ಬ್ಯಾಗ್ ವೊಂದರಲ್ಲಿ ಸುಟ್ಟಿದ್ದ ಮೃತದೇಹ ಕಂಡು ಬಂದಿದೆ. ಅದನ್ನು ವೈದ್ಯಕೀಯ ಪರೀಕ್ಷೆ ಕಳಿಸಿದ್ದು, ಆರೋಪಿ ಪತ್ನಿಯನ್ನು ಬಂಧಿಸಲಾಗಿದೆ. ಪ್ರಿಯಕರ ಅಮಿತ್ ಮಿಶ್ರಾನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...