alex Certify ಮೂವರು ದರೋಡೆಕೋರರನ್ನ ಹೊಡೆದು, ಒಬ್ಬನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಲಾರಿ ಡ್ರೈವರ್: ಇದು ಸಿನೆಮಾ ಕಥೆ ಅಲ್ಲ ರಿಯಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂವರು ದರೋಡೆಕೋರರನ್ನ ಹೊಡೆದು, ಒಬ್ಬನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಲಾರಿ ಡ್ರೈವರ್: ಇದು ಸಿನೆಮಾ ಕಥೆ ಅಲ್ಲ ರಿಯಲ್

ಸಿನೆಮಾಗಳಲ್ಲಿ ನೀವು ಹಿರೋ ಒಬ್ಬನೇ 10-15 ರೌಡಿಗಳನ್ನ ಹೊಡೆಯೋದನ್ನ ನೋಡಿರ್ತಿರಾ! ಇದೆಲ್ಲ ತೆರೆಯ ಮೇಲಷ್ಟೆ ನೋಡೋದಕ್ಕೆ ಚೆಂದ ಹೀಗೆಲ್ಲ ರಿಯಲ್ ಲೈಫ್‌ನಲ್ಲಿ ನಡೆಯೋದಕ್ಕೆ ಚಾನ್ಸೇ ಇಲ್ಲ. ಹಾಗಂತ ನಾವು ನೀವು ಅ೦ದೊಂಡಿರ್ತಿರಾ. ಆದರೆ ಮುಂಬೈನ ಜೋಗೇಶ್ವರಿಯ ಎಕ್ಸ್‌ಪ್ರೆಸ್‌ ಹೈ ವೇ ಬಳಿ ಲಾರಿ ಡ್ರೈವರ್ ಒಬ್ಬನೇ ಮೂವರು ದರೋಡೆಕೋರರನ್ನ ಹೊಡೆದಿದ್ದಲ್ಲದೇ, ಅವರಲ್ಲಿ ಒಬ್ಬನನ್ನ ಪೊಲೀಸರಿಗೆ ಒಪ್ಪಿಸಿದ್ದಾನೆ.

23 ವರ್ಷದ ಲಾರಿ ಚಾಲಕ ಶಾಕಿರ್‌ಖಾನ್, ರಾತ್ರಿ 9.30ಕ್ಕೆ ಕೆಲಸ ಮುಗಿಸಿ ಕೊಂಡು ಜೋಗೇಶ್ವರಿಯಿಂದ ಮುಲಾಡ್‌ ಗೆ ವಾಪಸ್ ಬರುವಾಗ ಮೂವರು ದರೋಡೆಕೋರರು ಈತನನ್ನ ಲೂಟಿ ಮಾಡುವುದಕ್ಕೆ ಅಟ್ಯಾಕ್ ಮಾಡಿದ್ದಾರೆ. ಬೈಕ್‌ಮೇಲೆ ಬಂದ ಈ ಕಳ್ಳರು ನೇರವಾಗಿ ಈತನ ಲಾರಿ ಮುಂದೆ ಹೋಗಿ ಅಡ್ಡಗಟ್ಟಿ ನಿಂತಿದ್ದಾರೆ.

ಹೀಗೆ ಮೂವರು ಒಮ್ಮಿಂದೊಮ್ಮೆ ಬಂದು ನಿಂತಿದ್ದನ್ನ ನೋಡಿ ಶಾಕಿರ್ ಶಾಕ್ ಆಗಿದ್ದಾನೆ. ಲಾರಿ ಓಡಿಸುವಾಗ ತನ್ನಿಂದ ಏನೋ ತಪ್ಪಾಗಿದೆ ಅಂತ ಅಂದುಕೊಂಡು ಲಾರಿಯನ್ನ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ. ಆದರೆ ಯಾವಾಗ ಅವರು ಲಾರಿ ಕೀ ಕಿತ್ತುಕೊಂಡು ಈತನಿಗೆ ಹೊಡೆಯಲು ಆರಂಭಿಸಿದರೋ, ಆಗಲೇ ಆತನಿಗೆ ಗೊತ್ತಾಗಿದ್ದು ಇವರು ದರೋಡೆಕೋರರು ಅಂತ.

ಅವರು ಶಾಕೀರ್‌ಖಾನ್ ಬಳಿ ಇದ್ದ 25 ಸಾವಿರ ಕಿತ್ತುಕೊಂಡು ಓಡಲು ಪ್ರಯತ್ನಿಸಿದಾಗ ತಕ್ಷಣವೇ ಎಚ್ಚೆತ್ತುಕೊಂಡ ಈತ ಅವರ ಬಳಿ ಇದ್ದ ಈತನ ದುಡ್ಡನ್ನ ಕಸಿದುಕೊಂಡ. ಅಷ್ಟೆ ಅಲ್ಲ ಆ ಕಳ್ಳರ ಮುಂದೆ ಹಿರೋನಂತೆ ಫೈಟ್ ಮಾಡಿ ಸರಿಯಾಗಿ ಗುಮ್ಮಿದಾನೆ. ಕೊನೆಗೆ ಒಬ್ಬನನ್ನ ಹಿಡಿದು ಅಲ್ಲೇ ಇದ್ದ ಅಂಧೇರಿ ಪೊಲೀಸರಿಗೆ ಒಪ್ಪಿಸಿದ್ದಾನೆ. ಉಳಿದಿಬ್ಬರು ಬೈಕ್‌ನಲ್ಲಿ ಓಡಿ ಹೋದರು.

ಈ ನಡುವೆ ರಸ್ತೆಯಲ್ಲಿ ಓಡಾಡುತ್ತಿದ್ದ ಬೇರೆ ಬೇರೆ ವಾಹನ ಸವಾರರು ಕೂಡಾ ಶಾಕೀರ್ ಸಹಾಯಕ್ಕೆ ಬಂದಿದ್ದಾರೆ. ತಕ್ಷಣವೇ ಅಲ್ಲಿ ನಡೆಯುತ್ತಿದ್ದ ಗಲಾಟೆಯನ್ನ ಹತ್ತಿರವೇ ಇದ್ದ ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈಗ ಬಂಧನ ಮಾಡಲಾಗಿರುವ ದರೋಡೆಕೋರರಲ್ಲಿ ಒಬ್ಬ ಪಕ್ಕದ ಮೇಧಾವಾಡಿಯ ನಿವಾಸಿ ನದೀ೦ ಶೇಖ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನೂ ಇಬ್ಬರ ಹುಡುಕಾಟದಲ್ಲಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...