ಮುಂಬೈನ ಅಂಧೇರಿ ಉದ್ಯಮಿಯ ತಂದೆ 78 ವರ್ಷದ ವ್ಯಕ್ತಿ ಆನ್ಲೈನ್ ವಂಚನೆ ಮೂಲಕ 50 ಸಾವಿರ ರೂಪಾಯಿ ಕಳೆದುಕೊಂಡ ಬಳಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದರು. ಇವರ ತಂದೆ ಈ ಘಟನೆ ಬಳಿಕ ಬರೋಬ್ಬರಿ 7 ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗಿದ್ದು ಆ ಬಳಿಕ ಸಾವನ್ನಪ್ಪಿದ್ದರು.
ಆದರೆ ಇದೀಗ ಬುಧವಾರ ಈ ಹಣ ವಾಪಸ್ ಖಾತೆಗೆ ಜಮೆ ಆಗಿದ್ದು ಮೃತ ವ್ಯಕ್ತಿಯ ಪುತ್ರ ಶಾಕ್ ಆಗಿದ್ದಾರೆ. ಬಳಿಕ ಮುಂಬೈ ಪೊಲೀಸರ ಸತತ ಶ್ರಮದ ಬಳಿಕ ಈ ಹಣ ವಾಪಸ್ ಸಿಕ್ಕಿದೆ ಎಂದು ತಿಳಿದುಬಂದಿದೆ.
2019 ಡಿಸೆಂಬರ್ನಲ್ಲಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಸತ್ಪಾಲ್ ಜಗ್ಗಿ ಎಂಬವರಿಗೆ ಬ್ಯಾಂಕ್ ಟೆಲಿಕಾಲರ್ ಎಂದು ಹೇಳಿಕೊಂಡು ಅಪರಿಚಿತರೊಬ್ಬರು ಕರೆ ಮಾಡಿದ್ದರು. ಕೆವೈಸಿಯನ್ನ ನವೀಕರಿಸದ ಕಾರಣ ನಿಮ್ಮ ಕ್ರೆಡಿಟ್ ಕಾರ್ಡ್ನ್ನು ನಿರ್ಬಂಧಿಸುತ್ತಿದ್ದೇವೆ ಎಂದು ವಾರ್ನಿಂಗ್ ನೀಡಿದ್ದಾರೆ.
ಇದರಿಂದ ಬೆದರಿದ ಸತ್ಪಾಲ್ ತಮ್ಮ ಬ್ಯಾಂಕ್ ವಿವರವನ್ನ ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಕ್ರೆಡಿಟ್ ಕಾರ್ಡ್ನಿಂದ 49999 ರೂಪಾಯಿಗಳನ್ನ ಕಟ್ ಮಾಡಿಕೊಳ್ಳಲಾಯ್ತು. ಬಳಿಕ ಮತ್ತೆ 9999ನ್ನು ತೆಗೆದುಕೊಳ್ಳಲಾಯ್ತು. ಇದಾದ ಬಳಿಕ ಸತ್ಪಾಲ್ ಖಿನ್ನತೆಗೆ ಒಳಗಾಗಿದ್ದರು ಹಾಗೂ ಜುಲೈ 2020ರಲ್ಲಿ ನಿಧನರಾದರು. ಈ ಪ್ರಕರಣವನ್ನ ಕೈಗೆತ್ತಿಕೊಂಡಿದ್ದ ಪೊಲೀಸರು ಕೊನೆಗೂ ಹಣವನ್ನ ವಾಪಸ್ ಮಾಡಿಸಿಕೊಟ್ಟಿದ್ದಾರೆ.