alex Certify BIG NEWS: ಬೆಚ್ಚಿಬೀಳಿಸುವಂತಿದೆ 6 ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟವರ ಸಂಖ್ಯೆ; ಪ್ರತಿದಿನ ಸರಾಸರಿ 98 ಸಾವು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಚ್ಚಿಬೀಳಿಸುವಂತಿದೆ 6 ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟವರ ಸಂಖ್ಯೆ; ಪ್ರತಿದಿನ ಸರಾಸರಿ 98 ಸಾವು ದಾಖಲು

ಮುಂಬೈ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ತೀವ್ರ ಕಳವಳವನ್ನುಂಟು ಮಾಡಿದೆ.
ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಸಾರ್ವಜನಿಕ ಆರೋಗ್ಯ ಇಲಾಖೆಯು ಒದಗಿಸಿದ ಮಾಹಿತಿಯ ಪ್ರಕಾರ, 2020 ರಲ್ಲಿ ವರದಿಯಾದ 5,633 ಸಾವುಗಳಿಗೆ ಹೋಲಿಸಿದರೆ, ಜನವರಿ 2021 ರಿಂದ ಜೂನ್ 2021 ರವರೆಗೆ (ಆರು ತಿಂಗಳಲ್ಲಿ) ಹೃದಯಾಘಾತದಿಂದ 17,880 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿವೆ.

ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯಿಂದ ಪಡೆದ ಮಾಹಿತಿಯು 2019 ಮತ್ತು 2018 ರಲ್ಲಿ ನಗರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಕ್ರಮವಾಗಿ 5,849 ಮತ್ತು 8,601 ಎಂದು ಬಹಿರಂಗಪಡಿಸುತ್ತದೆ. ಆರ್‌ಟಿಐನಲ್ಲಿ ನೀಡಿದ ಪ್ರತಿಕ್ರಿಯೆಯ ಪ್ರಕಾರ, ಜುಲೈನಿಂದ ಡಿಸೆಂಬರ್ 2021 ರವರೆಗೆ ವರದಿಯಾದ ಸಾವಿನ ಕಾರಣದ ಡೇಟಾವನ್ನು ಆರೋಗ್ಯ ಇಲಾಖೆಯ ಎಂಐಎಸ್ ಸೆಲ್ ಇನ್ನೂ ಪ್ರಕ್ರಿಯೆಗೊಳಿಸುತ್ತಿದೆ. ಆರ್‌ಟಿಐ ಕಾರ್ಯಕರ್ತ ಚೇತನ್ ಕೊಠಾರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಡೇಟಿಂಗ್ ಅಪ್ಲಿಕೇಶನ್ ನಲ್ಲಿ ವಿಚಿತ್ರ ಬೇಡಿಕೆಯಿಟ್ಟ ಈ ವ್ಯಕ್ತಿ..! ಅದೇನೆಂದು ಕೇಳಿದ್ರೆ ಅಚ್ಚರಿಪಡ್ತೀರಾ..!!

ವೈದ್ಯರ ಪ್ರಕಾರ, ಕಳೆದ ವರ್ಷದಿಂದ ಅವರೂ ಹೃದ್ರೋಗ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿರುವುದಾಗಿ ತಿಳಿಸಿದ್ದಾರೆ. 2020 ರಿಂದ ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಯಿತು. ಹೀಗಾಗಿ ಜನರು ಹೃದಯ ತಪಾಸಣೆಗೆ ಒಳಗಾಗಿದ್ದು ಬಹಳ ಕಡಿಮೆ. ಆಸ್ಪತ್ರೆಗೆ ಭೇಟಿ ನೀಡಿದ್ರೆ ಎಲ್ಲಿ ಕೊರೋನಾ ಅಂಟಿಕೊಳ್ಳುತ್ತೋ ಎಂಬ ಭಯದಿಂದಲೂ ಜನ ಹೃದಯ ತಪಾಸಣೆ ಮಾಡದಿರಲು ಕಾರಣವಿರಬಹುದು ಎಂದು ಮುಂಬೈನ ಸಿಂಬಯೋಸಿಸ್ ಆಸ್ಪತ್ರೆಯ ನಿರ್ದೇಶಕ ಕ್ಯಾಥ್ ಲ್ಯಾಬ್ಸ್ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಅಂಕುರ್ ಫಾಟರ್ಪೇಕರ್ ತಿಳಿಸಿದ್ದಾರೆ.

ವಾರಕ್ಕೆ ಕನಿಷ್ಠ 10 ರಿಂದ 15 ಹೃದಯಾಘಾತ ಪ್ರಕರಣಗಳನ್ನು ನೋಡುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. 35 ರಿಂದ 60 ವರ್ಷಗಳ ಒಳಗಿನ ಜನರೇ ಹೆಚ್ಚಾಗಿ ಹೃದಯಾಘಾತಕ್ಕೊಳಗಾಗಿರುವುದಾಗಿ ಅವರು ತಿಳಿಸಿದ್ದಾರೆ.

ಇದಲ್ಲದೇ, ಮಹಾರಾಷ್ಟ್ರ ಸರ್ಕಾರದ ವೈದ್ಯಕೀಯ ತುರ್ತು ಬೈಕ್ ಆಂಬ್ಯುಲೆನ್ಸ್ ಸೇವೆಯ ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 860 ಕರೆಗಳಲ್ಲಿ, 2021 ರಲ್ಲಿ ಅವರು ಹೃದಯ ಸಂಬಂಧಿ ಪ್ರಕರಣಗಳಿಗೆ ಸುಮಾರು 561 ಕರೆಗಳನ್ನು ಸ್ವೀಕರಿಸಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...