ಭಾನುವಾರದಂದು ಮುಂಬಯಿ ನಗರದಲ್ಲಿ ಒಬ್ಬರೇ ಒಬ್ಬರು ಕೂಡ ಕೊರೊನಾ ಸೋಂಕಿಗೆ ಬಲಿಯಾದ ಬಗ್ಗೆ ವರದಿಯಾಗಿಲ್ಲ. ಶೂನ್ಯ ಸಾವಿನ ದಾಖಲೆಯನ್ನು ನಗರ ಮಾಡಿದೆ. 2020ರ ಮಾರ್ಚ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ವಿಶ್ವಾದ್ಯಂತ ವ್ಯಾಪಿಸಲು ಆರಂಭಿಸಿದಾಗಿನಿಂದ ಮುಂಬಯಿನಲ್ಲಿ ಶೂನ್ಯ ಸಾವು ದಾಖಲಾಗಿರಲಿಲ್ಲ.
ʼಆರೆಂಜ್ʼ ಕ್ಯಾಪ್ ಪಡೆದ ಋತುರಾಜ್ ಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ಮೊದಲ ಮತ್ತು ಎರಡನೇ ಅಲೆಯ ದಾಳಿ ವೇಳೆ ದೇಶದಲ್ಲಿ ಅತಿಹೆಚ್ಚು ಮಂದಿ ಸೋಂಕಿಗೆ ಬಲಿಯಾದ ನಗರಗಳ ಪೈಕಿ ಮುಂಬಯಿ ನಗರ ಕೂಡ ಒಂದಾಗಿದೆ. ಆಮ್ಲಜನಕ ಕೊರತೆಯಿಂದ ಜನಸಾಮಾನ್ಯರು ಭಾರಿ ಪರದಾಡಿದ್ದರು. 2020ರ ಮಾರ್ಚ್ 17ರಂದು ಮುಂಬಯಿನಲ್ಲಿ ಕೊರೊನಾ ಸೋಂಕಿಗೆ ಮೊದಲ ವ್ಯಕ್ತಿ ಬಲಿಯಾಗಿದ್ದರು.
ಶೂನ್ಯ ಕೊರೊನಾ ಸಾವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಅವರು, ಮುಂಬಯಿ ಪಾಲಿಗೆ ಇದು ಬಹಳ ಸಮಾಧಾನಕರ ಮತ್ತು ಸಂತಸದ ಸುದ್ದಿ. ಇದಕ್ಕಾಗಿ ಶ್ರಮಿಸಿದ ಪಾಲಿಕೆ, ಜಿಲ್ಲಾಡಳಿತ, ವೈದ್ಯರು ಮತ್ತು ಕೊರೊನಾ ವಾರಿಯರ್ಸ್‌ಗಳಿಗೆ ಧನ್ಯವಾದ ಹಾಗೂ ಸಲ್ಯೂಟ್ ಅರ್ಪಿಸುವೆ. ಲಸಿಕೆಯ ಎರಡು ಡೋಸ್ ಪಡೆಯೋಣ ಮತ್ತು ಮಾಸ್ಕ್‌ಗಳನ್ನು ಸರಿಯಾಗಿ ಹಾಗೂ ಕಡ್ಡಾಯವಾಗಿ ಧರಿಸೋಣ ಎಂದು ಕರೆ ಕೊಟ್ಟಿದ್ದಾರೆ.
ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್ʼ ಸರಿಯಿಲ್ಲವೆಂದ ಭೂಪ…!
ಸದ್ಯಕ್ಕೆ ಮುಂಬಯಿನಲ್ಲಿ 5030 ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಚೇತರಿಕೆ ಪ್ರಮಾಣ 97% ಇದೆ. ಎರಡೂ ಡೋಸ್ ಪಡೆದವರ ಪ್ರಮಾಣ 55% ಇದೆ. ಕಳೆದ ಏಪ್ರಿಲ್ -ಮೇನಲ್ಲಿ ಕೊರೊನಾ 2ನೇ ಅಲೆಯ ಆರ್ಭಟ ಜೋರಾಗಿದ್ದಾಗ ಮುಂಬಯಿನಲ್ಲಿ ಪ್ರತಿದಿನ 11 ಸಾವಿರ ಜನರಿಗೆ ಕೊರೊನಾ ತಗುಲುತ್ತಿತ್ತು. ಮೇ 1ರಂದು ಅತ್ಯಧಿಕ, ಅಂದರೆ ಒಂದೇ ದಿನ 90 ಮಂದಿ ಕೊರೊನಾಗೆ ಬಲಿಯಾಗಿದ್ದರು.