alex Certify ವೃತ್ತಿಯನ್ನು ಹೋಲುವ ಗಣಪತಿ ವಿಗ್ರಹ ಮಾಡಿಸಿದ ಪೊಲೀಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃತ್ತಿಯನ್ನು ಹೋಲುವ ಗಣಪತಿ ವಿಗ್ರಹ ಮಾಡಿಸಿದ ಪೊಲೀಸ್‌ ಅಧಿಕಾರಿ

ಮುಂಬೈ ಪೊಲೀಸ್‌ ಇಲಾಖೆಯ ಇನ್‌ಸ್ಟಾಗ್ರಾಮ್‌ ಖಾತೆ ಯಾವಾಗಲೂ ಅಚ್ಚರಿಯ ವೇದಿಕೆಯೇ ಸರಿ. ಕೆಲವೊಮ್ಮ ಕಳ್ಳರಿಗೆ ಕಾವ್ಯದ ಮೂಲಕ ಎಚ್ಚರಿಕೆ ಕೊಡಲಾಗುತ್ತದೆ. ಮತ್ತೆ ಕೆಲವೊಮ್ಮೆ ನಗರದ ಜನಪ್ರಿಯ ಪ್ರದೇಶಗಳ ಹೆಸರಿನಲ್ಲಿನ ಅಕ್ಷರಗಳನ್ನು ತಿರುಚಿ, ಕೊರೊನಾ ಜಾಗೃತಿ ಮೂಡಿಸಲಾಗುತ್ತದೆ.

ಆದರೆ, ಈ ಬಾರಿ ಮುಂಬೈ ಪೊಲೀಸ್‌ ಇಲಾಖೆಯ ಅಧಿಕೃತ ಖಾತೆಯಲ್ಲಿನ ಫೋಟೊದಲ್ಲಿ ಪೊಲೀಸ್‌ ಸಮವಸ್ತ್ರ ತೊಟ್ಟು, ವಾಚ್‌ ಕಟ್ಟಿರುವ ಖಡಕ್‌ ಐಪಿಎಸ್‌ ಅಧಿಕಾರಿ ಗಣಪನ ಚಿತ್ರ‌ ಪ್ರತ್ಯಕ್ಷವಾಗಿದೆ.

ಭಕ್ತಿ – ಶ್ರದ್ದಾ ಕೇಂದ್ರ ಇಡಗುಂಜಿಯ ಸಿದ್ದಿ ವಿನಾಯಕ ದೇವಸ್ಥಾನ

ಗಣೇಶ ಚತುರ್ಥಿಗೆ ವಿಲೆ ಪಾರ್ಲೆ ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡುವ ಇನ್ಸ್ ಪೆಕ್ಟರ್‌ ರಾಜೇಂದ್ರ ಕಾಣೆ ಅವರಿಗೆ ಈ ಐಡಿಯಾ ಹೊಳೆದಿದೆ.

ತಮ್ಮ ವೃತ್ತಿಯನ್ನೇ ಹೋಲುವ ಗಣಪನ ವಿಗ್ರಹ ಮಾಡಿಸಿ ಮನೆಗೆ ತಂದು ಪೂಜಿಸಿದ್ದಾರೆ. ಗಣಪತಿ ಬಪ್ಪಾಗೆ ‘ಇಂಡಿಯನ್‌ ಪ್ರೀಮಿಯರ್‌ ಸೆಕ್ಯೂರಿಟಿ (ಐಪಿಎಸ್‌)’ ಎಂದು ಸಂಬೋಧಿಸಿ ಮಾಡಲಾಗಿರುವ ಪೋಸ್ಟ್‌ ಭಾರಿ ವೈರಲ್‌ ಆಗಿದೆ. ಈ ಫೋಟೊಗೆ ಸಾವಿರಕ್ಕೂ ಅಧಿಕ ಲೈಕ್ಸ್‌ ಸಿಕ್ಕಿದೆ. ಬೇರೆ ಬೇರೆ ಅಲಂಕಾರದ ಗಣಪತಿ ಇಡುವ ಸಂಪ್ರದಾಯ ಇರುವಾಗ ಪೊಲೀಸ್ ಗಣಪತಿ ಒಂದು ಅಚ್ಚರಿಯೇ ಸರಿ.

View this post on Instagram

A post shared by Mumbai Police (@mumbaipolice)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...