ಮುಂಬೈ ಪೊಲೀಸ್ ಇಲಾಖೆಯ ಇನ್‌ಸ್ಟಾಗ್ರಾಮ್ ಖಾತೆ ಯಾವಾಗಲೂ ಅಚ್ಚರಿಯ ವೇದಿಕೆಯೇ ಸರಿ. ಕೆಲವೊಮ್ಮ ಕಳ್ಳರಿಗೆ ಕಾವ್ಯದ ಮೂಲಕ ಎಚ್ಚರಿಕೆ ಕೊಡಲಾಗುತ್ತದೆ. ಮತ್ತೆ ಕೆಲವೊಮ್ಮೆ ನಗರದ ಜನಪ್ರಿಯ ಪ್ರದೇಶಗಳ ಹೆಸರಿನಲ್ಲಿನ ಅಕ್ಷರಗಳನ್ನು ತಿರುಚಿ, ಕೊರೊನಾ ಜಾಗೃತಿ ಮೂಡಿಸಲಾಗುತ್ತದೆ.
ಆದರೆ, ಈ ಬಾರಿ ಮುಂಬೈ ಪೊಲೀಸ್ ಇಲಾಖೆಯ ಅಧಿಕೃತ ಖಾತೆಯಲ್ಲಿನ ಫೋಟೊದಲ್ಲಿ ಪೊಲೀಸ್ ಸಮವಸ್ತ್ರ ತೊಟ್ಟು, ವಾಚ್ ಕಟ್ಟಿರುವ ಖಡಕ್ ಐಪಿಎಸ್ ಅಧಿಕಾರಿ ಗಣಪನ ಚಿತ್ರ ಪ್ರತ್ಯಕ್ಷವಾಗಿದೆ.
ಭಕ್ತಿ – ಶ್ರದ್ದಾ ಕೇಂದ್ರ ಇಡಗುಂಜಿಯ ಸಿದ್ದಿ ವಿನಾಯಕ ದೇವಸ್ಥಾನ
ಗಣೇಶ ಚತುರ್ಥಿಗೆ ವಿಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಇನ್ಸ್ ಪೆಕ್ಟರ್ ರಾಜೇಂದ್ರ ಕಾಣೆ ಅವರಿಗೆ ಈ ಐಡಿಯಾ ಹೊಳೆದಿದೆ.
ತಮ್ಮ ವೃತ್ತಿಯನ್ನೇ ಹೋಲುವ ಗಣಪನ ವಿಗ್ರಹ ಮಾಡಿಸಿ ಮನೆಗೆ ತಂದು ಪೂಜಿಸಿದ್ದಾರೆ. ಗಣಪತಿ ಬಪ್ಪಾಗೆ ‘ಇಂಡಿಯನ್ ಪ್ರೀಮಿಯರ್ ಸೆಕ್ಯೂರಿಟಿ (ಐಪಿಎಸ್)’ ಎಂದು ಸಂಬೋಧಿಸಿ ಮಾಡಲಾಗಿರುವ ಪೋಸ್ಟ್ ಭಾರಿ ವೈರಲ್ ಆಗಿದೆ. ಈ ಫೋಟೊಗೆ ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಬೇರೆ ಬೇರೆ ಅಲಂಕಾರದ ಗಣಪತಿ ಇಡುವ ಸಂಪ್ರದಾಯ ಇರುವಾಗ ಪೊಲೀಸ್ ಗಣಪತಿ ಒಂದು ಅಚ್ಚರಿಯೇ ಸರಿ.
https://www.instagram.com/p/CT3uN0BITZ8/?utm_source=ig_embed&ig_rid=d676df19-171d-4414-904e-727e85655344