ಮುಂಬೈ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನೂಪುರ್ ಶರ್ಮಾ ಹಲವು ಸಂಕಷ್ಟಗಳನ್ನು ಒಟ್ಟಿಗೆ ಎದುರಿಸಬೇಕಾಗಿ ಬಂದಿದೆ. ಜಾಗತಿಕ ಮಟ್ಟದಲ್ಲಿ ಕೂಡ ನೂಪುರ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇವೆಲ್ಲದರ ಮಧ್ಯೆ, ದೇಶದ ವಿವಿಧೆಡೆ ಪೊಲೀಸ್ ದೂರುಗಳು ದಾಖಲಾಗುತ್ತಿವೆ. ಮುಂಬೈನಲ್ಲಿ ದಾಖಲಾಗಿರುವ ದೂರಿಗೆ ಸ್ಪಂದಿಸಿರುವ ಪೊಲೀಸರು, ನೂಪುರ್ ಶರ್ಮಾಗೆ ಸಮನ್ಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
BIG NEWS: ಬೆಂಗಳೂರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನ ಬಂಧನ; ಜಮ್ಮು-ಕಾಶ್ಮೀರ ಪೊಲೀಸರ ಕಾರ್ಯಾಚರಣೆ
ಈ ವಿಚಾರದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ವಿರುದ್ಧ ರಝಾ ಅಕಾಡೆಮಿಯ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ದೂರು ನೀಡಿದ್ದರು. ದಕ್ಷಿಣ ಮುಂಬೈನ ಪೈಡೋನಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.
ಮುಸ್ಲಿಮರು ಪೂಜಿಸುವ ಪ್ರವಾದಿ ಮತ್ತು ಅವರ ಪತ್ನಿ ಬಗ್ಗೆ ನೂಪುರ್ ಶರ್ಮಾ ಕೆಲವು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು. ಇದರ ವಿಡಿಯೋ ಕ್ಲಿಪ್ ಇರುವ ಟ್ವಿಟರ್ ಲಿಂಕ್ ನೊಂದಿಗೆ ಶೇಖ್ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ನವೀನ್ ಕುಮಾರ್ ಜಿಂದಾಲ್ ಕೂಡ ಇಂಥದ್ದೇ ಟ್ವೀಟ್‌ಗಳನ್ನು ಮಾಡಿ ಡಿಲೀಟ್ ಮಾಡಿದ್ದರು. ಹೀಗಾಗಿ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಇಬ್ಬರ ಹೇಳಿಕೆಗಳು ಅವರ ವೈಯಕ್ತಿಕ. ಪಕ್ಷದ ನಿಲವು ಅಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಈ ನಡುವೆ, ಇವರ ಹೇಳಿಕೆಗಳನ್ನು ಇರಾನ್, ಕುವೈತ್, ಕತಾರ್ ಮತ್ತು ಪಾಕಿಸ್ತಾನ ಸೇರಿ ಹಲವು ದೇಶಗಳು ಖಂಡಿಸಿವೆ.