
ಮುಂಬೈ: ವೆಬ್ ಸಿರೀಸ್ ನೆಪದಲ್ಲಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ ದಂಧೆಯನ್ನು ಮುಂಬೈನ ಚಾರ್ಕೋಪ್ ಪೊಲೀಸರು ಭೇದಿಸಿದ್ದಾರೆ.
ಆರೋಪಿಗಳು ಚಿತ್ರಗಳನ್ನು ಬೇರೆ ಬೇರೆ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅನಿರುದ್ಧ್ ಪ್ರಸಾದ್ ಜಂಗ್ಡೆ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ 29 ವರ್ಷದ ಮಹಿಳಾ ಮಾಡೆಲ್ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.