alex Certify Shocking: ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ ಈ ಸಮುದ್ರ ತೀರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ ಈ ಸಮುದ್ರ ತೀರ..!

ಮುಂಬೈನ ಜುಹು ಬೀಚ್​​ನಲ್ಲಿ 5 ಕಿಲೋಮೀಟರ್​ ವ್ಯಾಪ್ತಿಯಲ್ಲಿ ತೈಲ ಸೋರಿಕೆಯಿಂದಾಗಿ ಮರಳು ಕಪ್ಪು ಬಣ್ಣಕ್ಕೆ ತಿರುಗಿದೆ.

ಬೆಳಗ್ಗೆ ಸಮುದ್ರಕ್ಕೆ ವಾಯುವಿಹಾರಕ್ಕೆಂದು ಬಂದವರು ಕಪ್ಪು ಬಣ್ಣದ ಮರಳನ್ನು ಕಂಡು ಆತಂಕಕ್ಕೀಡಾದರು. ಸಮುದ್ರದ ನೀರಿಗೆ ತೈಲ ಹೇಗೆ ಚೆಲ್ಲಿದೆ ಅನ್ನೋದ್ರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.

ಮುಂಬೈ ಮೇಯರ್​​ ಕಿಶೋರಿ ಪೆಡ್ನೇಕರ್​​ ಈ ಬಗ್ಗೆ ಮಾತನಾಡಿದ್ದು, ಜುಹು ಬೀಚ್​​ನಲ್ಲಿ ತೈಲ ಹೇಗೆ ಚೆಲ್ಲಿದೆ ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ನಮಗೆ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅದನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ಹೇಳಿದ್ರು.

ಟ್ವಿಟರ್​ನಲ್ಲಿ ಜುಹು ಸಮುದ್ರಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿದೆ. ಬೀಚ್​ ಹಾಗೂ ಸಮುದ್ರ ನೀರಿನಲ್ಲಿ ನಾವು ಈ ರೀತಿಯಲ್ಲಿ ತೈಲವನ್ನು ಹಿಂದೆಂದೂ ಕಂಡೇ ಇರಲಿಲ್ಲ. ಇದು ಬಹುಶಃ ಸ್ಟೀಮರ್​ ಬಿರುಕಿನಿಂದ ಉಂಟಾಗಿರಬಹುದು ಎಂದು ಪ್ರತ್ಯಕ್ಷದರ್ಶಿ ಪ್ರಮೋದ್​ ವಿರ್ಕಾರ್ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...