ಮುಂಬೈನ ಜುಹು ಬೀಚ್ನಲ್ಲಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ತೈಲ ಸೋರಿಕೆಯಿಂದಾಗಿ ಮರಳು ಕಪ್ಪು ಬಣ್ಣಕ್ಕೆ ತಿರುಗಿದೆ.
ಬೆಳಗ್ಗೆ ಸಮುದ್ರಕ್ಕೆ ವಾಯುವಿಹಾರಕ್ಕೆಂದು ಬಂದವರು ಕಪ್ಪು ಬಣ್ಣದ ಮರಳನ್ನು ಕಂಡು ಆತಂಕಕ್ಕೀಡಾದರು. ಸಮುದ್ರದ ನೀರಿಗೆ ತೈಲ ಹೇಗೆ ಚೆಲ್ಲಿದೆ ಅನ್ನೋದ್ರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಈ ಬಗ್ಗೆ ಮಾತನಾಡಿದ್ದು, ಜುಹು ಬೀಚ್ನಲ್ಲಿ ತೈಲ ಹೇಗೆ ಚೆಲ್ಲಿದೆ ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ನಮಗೆ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅದನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ಹೇಳಿದ್ರು.
ಟ್ವಿಟರ್ನಲ್ಲಿ ಜುಹು ಸಮುದ್ರಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿದೆ. ಬೀಚ್ ಹಾಗೂ ಸಮುದ್ರ ನೀರಿನಲ್ಲಿ ನಾವು ಈ ರೀತಿಯಲ್ಲಿ ತೈಲವನ್ನು ಹಿಂದೆಂದೂ ಕಂಡೇ ಇರಲಿಲ್ಲ. ಇದು ಬಹುಶಃ ಸ್ಟೀಮರ್ ಬಿರುಕಿನಿಂದ ಉಂಟಾಗಿರಬಹುದು ಎಂದು ಪ್ರತ್ಯಕ್ಷದರ್ಶಿ ಪ್ರಮೋದ್ ವಿರ್ಕಾರ್ ಹೇಳಿದ್ರು.