alex Certify ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕಿ ಸಾವಿಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕಿ ಸಾವಿಗೆ ಶರಣು

ಮುಂಬೈ: ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿದ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮುಂಬೈನಲ್ಲಿ ನಡೆದಿದೆ.

ಬಾಲಕಿಯ ಹೆತ್ತವರ ಹೇಳಿಕೆಯನ್ನು ದಾಖಲಿಸಿದ ನಂತರ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿಯು ತನ್ನ ಪೋಷಕರು ಮತ್ತು ನಾಲ್ವರು ಒಡಹುಟ್ಟಿದವರೊಂದಿಗೆ ಕಾಂಡಿವಿಲಿ ಪೂರ್ವದಲ್ಲಿರುವ ಅವರ ಜನಪೌದ ನಿವಾಸದಲ್ಲಿ ವಾಸಿಸುತ್ತಿದ್ದರು.

ಕಾಣೆಯಾಗಿದ್ದ ಯುವತಿ ಮರಳಿ ಬಂದು ಹೇಳಿದ ವಿಷಯ ಕೇಳಿ ಪೋಷಕರಿಗೆ ಅಚ್ಚರಿ…!

ತನ್ನ ಒಡಹುಟ್ಟಿದವರೊಂದಿಗೆ ಈಕೆ ಆಗಾಗ್ಗೆ ಜಗಳವಾಡುತ್ತಿದ್ದಳಂತೆ. ಅಲ್ಲದೆ ಈಕೆ ತುಂಬಾ ಬೇಗನೇ ಕೋಪಿಸಿಕೊಳ್ಳುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಆದರೆ, ಬಾಲಕಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ಕುಟುಂಬಸ್ಥರು ಊಹಿಸಿರಲಿಲ್ಲ.

ಮೊಬೈಲ್ ನಲ್ಲಿ ಆಡುತ್ತಿದ್ದ ಸಹೋದರನೊಂದಿಗೆ ವಾಗ್ವಾದಕ್ಕಿಳಿದ ಬಾಲಕಿ ತಾನು ವಿಡಿಯೋ ಗೇಮ್ ಆಡಬೇಕು, ಮೊಬೈಲ್ ಕೊಡುವಂತೆ ಜಗಳವಾಡಿದ್ದಾಳೆ. ಮೊಬೈಲ್ ಸಿಗದಿದ್ದಕ್ಕೆ ಕೋಪಗೊಂಡು ಆತ್ಮಹತ್ಯೆಯ ದಾರಿ ಹಿಡಿದಿರುವುದು ನಿಜಕ್ಕೂ ದುರಂತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...