alex Certify ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸುವುದು ಅಪರಾಧವೇ….? ನ್ಯಾಯಾಲಯ ನೀಡಿದೆ ಈ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸುವುದು ಅಪರಾಧವೇ….? ನ್ಯಾಯಾಲಯ ನೀಡಿದೆ ಈ ಮಹತ್ವದ ತೀರ್ಪು

ಭಾವಿ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮದುವೆಗೂ ಮುನ್ನ ಮಹಿಳೆಗೆ ‘ಅಶ್ಲೀಲ ಸಂದೇಶ’ ಕಳುಹಿಸುವುದು ಒಬ್ಬರ ಘನತೆಗೆ ಧಕ್ಕೆ ತರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯೊಬ್ಬರಿಗೆ ವಂಚಿಸಿ, ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ 36 ವರ್ಷದ ವ್ಯಕ್ತಿಗೆ ಕೋರ್ಟ್ ನೆಮ್ಮದಿ ನೀಡಿದೆ. ಈ ಪ್ರಕರಣವನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಕಳೆದ 11 ವರ್ಷಗಳಿಂದ ಈ ಪ್ರಕರಣ ನಡೆಯುತ್ತಿತ್ತು. ಮದುವೆಗೆ ಮೊದಲು ಇಂತಹ ಸಂದೇಶಗಳನ್ನು ಕಳುಹಿಸುವುದು ಸಂತೋಷವನ್ನು ನೀಡುತ್ತದೆ  ಎಂದು ನ್ಯಾಯಾಲಯ ಹೇಳಿದೆ. ಸಂಗಾತಿಗೆ ಇದೆಲ್ಲವೂ ಇಷ್ಟವಾಗದಿದ್ದರೆ, ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ವಿವೇಚನೆಯನ್ನು ಹೊಂದಿರುತ್ತಾರೆ. ಆಗ ಸಂದೇಶ ಕಳುಹಿಸಿದ ಸಂಗಾತಿ ಅಂತಹ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ  ಮಹಿಳೆ ಘನತೆಗೆ ಧಕ್ಕೆ ತರಲು ಇಂತಹ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ.

2010 ರಲ್ಲಿ ಮಹಿಳೆ ಪುರುಷನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಳು. ಇಬ್ಬರೂ 2007 ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಭೇಟಿಯಾಗಿದ್ದರು. ಈ ಮದುವೆಗೆ ಯುವಕನ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಇದರ ನಂತರ, 2010 ರಲ್ಲಿ, ಯುವಕ ಹುಡುಗಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದ್ದ. ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ, ಮದುವೆಯ ಭರವಸೆ ನೀಡಿ, ನಂತ್ರ ಮದುವೆಯಾಗದೆ ಇರುವುದು ವಂಚನೆ ಅಥವಾ ಅತ್ಯಾಚಾರ ಎನ್ನಲಾಗದು ಎಂದಿದೆ.

ಇಬ್ಬರು ಮದುವೆಯಾಗಲು ಆರ್ಯಸಮಾಜ ಭವನಕ್ಕೆ ಹೋಗಿದ್ದರು. ಆದರೆ ಮದುವೆಯ ನಂತರ ಎಲ್ಲಿ ವಾಸವಾಗಬೇಕೆಂಬ ವಿಚಾರದಲ್ಲಿ ಜಗಳ ನಡೆದಿತ್ತು. ಕೊನೆಗೆ ಹುಡುಗ ತನ್ನ ತಾಯಿಯ ಮಾತಿಗೆ ಮಣಿದು ಮದುವೆಯಾಗಲು ನಿರಾಕರಿಸಿದ್ದ. ಮದುವೆಗೂ ಮುನ್ನ ಪ್ರೇಯಸಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಇಬ್ಬರ ನಡುವೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...