alex Certify ಶಾಕಿಂಗ್​: ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿದ್ದ ಮಹಿಳೆಗೆ ಅಶ್ಲೀಲ ವಿಡಿಯೋ ಕಳಿಸಿದ ಕ್ಯಾಬ್​ ಚಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಬುಕ್ಕಿಂಗ್​ ಕ್ಯಾನ್ಸಲ್​ ಮಾಡಿದ್ದ ಮಹಿಳೆಗೆ ಅಶ್ಲೀಲ ವಿಡಿಯೋ ಕಳಿಸಿದ ಕ್ಯಾಬ್​ ಚಾಲಕ….!

ರೈಡ್​ ಕ್ಯಾನ್ಸಲ್​ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡ ಕ್ಯಾಬ್​​ ಚಾಲಕ ಮಹಿಳೆಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ ಆಘಾತಕಾರಿ ಘಟನೆಯು ಮುಂಬೈನಲ್ಲಿ ನಡೆದಿದೆ.

ಅಶ್ಲೀಲ ವಿಡಿಯೋ ಕಳುಹಿಸಿದ್ದು ಮಾತ್ರವಲ್ಲದೇ ಕ್ಯಾಬ್​ ಚಾಲಕ ಮಹಿಳೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಕ್ಟೋಬರ್​​ 3ರಂದು ಈ ಘಟನೆ ನಡೆದಿದೆ. ದೂರುದಾರ ಮಹಿಳೆಯು ತನ್ನ ಪತಿ ಹಾಗೂ ಮಾವನಿಗಾಗಿ ಈ ಕ್ಯಾಬ್​ ಬುಕ್​ ಮಾಡಿದ್ದರು. ಆದರೆ ಕಾರಿನಲ್ಲಿ ಎಸಿ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಬುಕ್ಕಿಂಗ್​ ರದ್ದು ಮಾಡಿದ್ದರು.

ಇದಾದ ಮಾರನೇ ದಿನದಿಂದ ಮಹಿಳೆ ಹಾಗೂ ಅವರ ಪತಿಗೆ ವಿವಿಧ ಮೊಬೈಲ್​ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದ್ದವು. ಇದರಿಂದ ಬೇಸತ್ತಿದ್ದ ಮಹಿಳೆಯು ಎಲ್​ಟಿ ಮಾರ್ಗ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ವಿಚಾರಣೆ ಆರಂಭಿಸುವ ವೇಳೆಗೆ ಆರೋಪಿಯು ಬಿಹಾರಕ್ಕೆ ತೆರಳಿದ್ದ. ಹೀಗಾಗಿ ಪೊಲೀಸ್​ ತಂಡ ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಉತ್ಸವ್​ ಕುಮಾರ್​ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...