alex Certify ಶಾಕಿಂಗ್​​: ಬಟ್ಟೆ ವಾಶ್​ ಮಾಡಿಲ್ಲ ಅಂತಾ ಪುಟ್ಟ ಬಾಲಕಿ ಮೈಮೇಲೆ ಬಿಸಿನೀರು ಚೆಲ್ಲಿದ ಪಾಪಿ ಮಹಿಳೆ…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​​: ಬಟ್ಟೆ ವಾಶ್​ ಮಾಡಿಲ್ಲ ಅಂತಾ ಪುಟ್ಟ ಬಾಲಕಿ ಮೈಮೇಲೆ ಬಿಸಿನೀರು ಚೆಲ್ಲಿದ ಪಾಪಿ ಮಹಿಳೆ…​..!

9 ವರ್ಷದ ಸೋದರಸೊಸೆ ಸರಿಯಾಗಿ ಬಟ್ಟೆ ತೊಳೆಯಲಿಲ್ಲ ಎಂಬ ಒಂದೇ ಕಾರಣಕ್ಕೆ 30 ವರ್ಷದ ಮಹಿಳೆಯು ಆಕೆಯ ಮೈಮೇಲೆ ಬೀಸಿ ನೀರು ಚೆಲ್ಲಿದ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನೆರೆಹೊರೆಯವರು ಮಗುವಿನ ಮೈಮೇಲೆ ಸುಟ್ಟ ಗಾಯಗಳನ್ನು ನೋಡಿದ ಬಳಿಕ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಳಿಕ ಬೆಚ್ಚಿ ಬಿದ್ದಿರುವ ಬಾಲಕಿಯು ತನ್ನ ಆಂಟಿಯ ಮನೆಗೆ ವಾಪಸ್​ ಹೋಗಲು ಹೆದರುತ್ತಿದ್ದಾಳೆ ಎನ್ನಲಾಗಿದೆ. ಪ್ರಸ್ತುತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆಕೆ ತಾನು ಬಟ್ಟೆ ಸರಿಯಾಗಿ ಒಗೆದಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಆಂಟಿ ನನ್ನ ಮೇಲೆ ಬಿಸಿ ನೀರು ಚೆಲ್ಲಿದ್ದಾಳೆ ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ಬಿಸಿ ನೀರು ಚೆಲ್ಲಿದ ಪರಿಣಾಮ ಬಾಲಕಿಯ ಕುತ್ತಿಗೆ, ಬಲ ತೋಳು, ಕಿವಿ ಹಾಗೂ ಕಾಲಿಗೆ ಗಾಯಗಳಾಗಿವೆ.

ಬಂಧಿತ ಮಹಿಳೆಯನ್ನು ಸಫೀಯಾ ಶೇಖ್​ ಎಂದು ಗುರುತಿಸಲಾಗಿದೆ. ಈಕೆಯನ್ನು ಐಪಿಸಿ ಸೆಕ್ಷನ್​ 326ರ ಅಡಿಯಲ್ಲಿ ಬಂಧಿಸಲಾಗಿದೆ. ಬಾಲಕಿಯ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಇದೇ ಕಾರಣಕ್ಕಾಗಿ ಬಾಲಕಿಯನ್ನು ಆಕೆಯ ಆಂಟಿಯ ಮನೆಯಲ್ಲಿ ಇಡಲಾಗಿತ್ತು. ಬಾಲಕಿ ಡಿಸ್ಚಾರ್ಜ್​ ಆಗುತ್ತಿದ್ದಂತೆಯೇ ಆಕೆಯನ್ನು ತಾಯಿಯ ಹಿರಿಯ ಸಹೋದರನ ಕಸ್ಟಡಿಗೆ ನೀಡಲಾಗುತ್ತೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...