alex Certify ಅಪರಿಚಿತರ ಕರೆ ನಂಬಿ ಬ್ಯಾಂಕ್ ಮಾಹಿತಿ ನೀಡುವ ಮುನ್ನ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರಿಚಿತರ ಕರೆ ನಂಬಿ ಬ್ಯಾಂಕ್ ಮಾಹಿತಿ ನೀಡುವ ಮುನ್ನ ಓದಿ ಈ ಸುದ್ದಿ

ಬ್ಯಾಂಕ್​​ ಖಾತೆಗಳ ವಿಚಾರದಲ್ಲಿ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ.. ಸೈಬರ್​ ಕಳ್ಳರು ಯಾವುದೇ ಸಮಯದಲ್ಲಿ ನಮ್ಮ ಖಾತೆಗಳಿಗೆ ಕನ್ನ ಹಾಕಿಬಿಡಬಹುದು. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ದಕ್ಷಿಣ ಮುಂಬೈನ ಕಫ್​ ಪರೇಡ್​​ನ 80 ವರ್ಷದ ವೈದ್ಯರೊಬ್ಬರು ಸೈಬರ್​ ವಂಚನೆಗೆ ಗುರಿಯಾಗಿದ್ದಾರೆ. ವೈದ್ಯರಿಂದ ಕೆವೈಸಿ ಮಾಹಿತಿ ಪಡೆದ ಸೈಬರ್​ ವಂಚಕರು 2.99 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಈ ಸಂಬಂಧ ಕಫ್​ ಪರೇಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ನವೆಂಬರ್​ 8ರಂದು ನಿವೃತ್ತ ವೈದ್ಯನ ಮೊಬೈಲ್​ಗೆ ಒಂದು ಸಂದೇಶ ಬಂದಿತ್ತು.

ಈ ಸಂದೇಶದಲ್ಲಿ , ‘ ಪ್ರಿಯ ಗ್ರಾಹಕರೇ, ನಿಮ್ಮ ಪೆಟಿಎಂ ಕೆವೈಸಿ ಅವಧಿ ಮೀರಿದೆ. ಹೀಗಾಗಿ ಇನ್ನು ಮುಂದಿನ 24 ಗಂಟೆಗಳಲ್ಲಿ ನಿಮ್ಮ ಪೇಟಿಎಂ ಖಾತೆ ಬ್ಲಾಕ್​ ಆಗಲಿದೆ. ಇದಕ್ಕಾಗಿ ನೀವು 98******” ಸಂಖ್ಯೆಗೆ ಕರೆ ಮಾಡಿ ನಿಮ್ಮ ಕೆವೈಸಿ ಮಾಹಿತಿಯನ್ನು ನೀಡಿ ಎಂದು ಬರೆಯಲಾಗಿತ್ತು. ಕೂಡಲೇ ಈ ಸಂಖ್ಯೆಗೆ ಕರೆ ಮಾಡಿದ ನಿವೃತ್ತ ವೈದ್ಯನಿಗೆ ಎನಿ ಡೆಸ್ಕ್​ ಮೂಲಕ ಕೆವೈಸಿ ಅಪ್​ಡೇಟ್​ ಮಾಡುವಂತೆ ಹೇಳಲಾಯ್ತು. ಎನಿ ಡೆಸ್ಕ್​ ಅಪ್ಲಿಕೇಶನ್​ ಮೂಲಕ ಮತ್ತೊಬ್ಬರು ನಿಮ್ಮ ಮೊಬೈಲ್​ ಪರದೆ ಮೇಲೆ ಕಣ್ಣಿಡಬಹುದು. ಹೀಗಾಗಿ ವೈದ್ಯ ಒದಗಿಸಿದ ಎಲ್ಲಾ ಮಾಹಿತಿಗಳನ್ನು ನಮೂದಿಸಿಕೊಂಡ ಸೈಬರ್​ ವಂಚಕರು ಹಣ ಪೀಕಿದ್ದಾರೆ.

ದೂರುದಾರ ನಿವೃತ್ತ ವೈದ್ಯ ಎಟಿಎಂ ಕಾರ್ಡ್​ ಸಿವಿವಿ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡಿ 2.99 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ತಾವು ವಂಚನೆಗೊಳಗಾಗಿದ್ದು ತಿಳಿಯುತ್ತದ್ದಂತೆಯೇ ಕೂಡಲೇ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...