alex Certify ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್​ ಅಂಬಾನಿ..! ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್​ ಅಂಬಾನಿ..! ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಸಾಧನೆ

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಶುಕ್ರವಾರ ಷೇರು ಮಾರುಕಟ್ಟೆಯ ಗೂಳಿ ಓಟ ನಿಲ್ಲಿಸುವವರೆಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಈ ಸ್ಥಾನಕ್ಕೆ ಮುಖೇಶ್​ ಅಂಬಾನಿಗೆ ಅದಾನಿ ಗ್ರೂಪ್​ ಅಧ್ಯಕ್ಷ ಗೌತಮ್​ ಅದಾನಿ ವ್ಯಾಪಕ ಪೈಪೋಟಿ ನೀಡಿದ್ದರು.

91.4 ಶತಕೋಟಿ ಡಾಲರ್​ ನಿವ್ವಳ ಮೌಲ್ಯದೊಂದಿಗೆ ಮುಖೇಶ್​ ಅಂಬಾನಿ ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಅದಾನಿ 78.1 ಶತಕೋಟಿ ಡಾಲರ್​​ ಸಂಪತ್ತು ಹೊಂದುವ ಮೂಲಕ ಈ ಪಟ್ಟಿಯಲ್ಲಿ 13ನೇ ಸ್ಥಾನವನ್ನು ಪಡೆದಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿನ ಸ್ಥಾನಗಳು ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಉದ್ಯಮಿಗಳು ಪಟ್ಟಿ ಮಾಡಿರುವ ಘಟಕಗಳ ಸ್ಟಾಕ್​ ಬೆಲೆ ಹಾಗೂ ಈ ಕಂಪನಿಗಳಲ್ಲಿ ಅವರ ಪಾಲನ್ನು ಆಧರಿಸಿ ನಿವ್ವಳ ಮೌಲ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.

ಕಳೆದ ವರ್ಷ ಮೇ ತಿಂಗಳಿನಿಂದ ಗೌತಮ್​ ಅದಾನಿ ವಿಶ್ವದ ಶ್ರೀಮಂತರ ಸ್ಥಾನದ ಪಟ್ಟಿಯಲ್ಲಿ ಏರುವ ಮೂಲಕ ಅಂಬಾನಿಗೆ ಪ್ರಬಲ ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ಆದರೆ ವಿಶ್ಲೇಷಕರು ನೀಡುವ ಮಾಹಿತಿಯ ಪ್ರಕಾರ ಅದಾನಿ ಗ್ರೂಪ್​​ ಕಂಪನಿಗಿಂತ ರಿಲಯನ್ಸ್​ ಇಂಡಸ್ಟ್ರೀಸ್​ ಮೂರು ಪಟ್ಟು ದೊಡ್ಡದಾಗಿದೆ. ಅದಾನಿ ಎಂಟರ್​ಪ್ರೈಸಸ್, ಅದಾನಿ ಪವರ್​, ಅದಾನಿ ಪೋರ್ಟ್ಸ್​ನ ಷೇರುಗಳು ಕಳೆದ ಕೆಲ ವರ್ಷಗಳಿಂದ ಹಲವು ಪಟ್ಟು ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...