alex Certify ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ

ಚಹಾ ಸವಿಯಲು ವಿಶೇಷವಾದವರೊಬ್ಬರ ಕಂಪನಿ ಪಡೆದ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನೆಟ್ಟಿಗರಿಗೆ ಹೊಸ ಲುಕ್‌ನಲ್ಲಿ ಭಾರೀ ಲೈಕ್ ಆಗಿದ್ದಾರೆ.

ತಮ್ಮ ಮುದ್ದಿನ ಮಕಾವ್‌ ಗಿಣಿಯೊಂದಿಗೆ ಧೋನಿ ಚಹಾ ಹೀರುತ್ತಿರುವ ಚಿತ್ರಗಳನ್ನು ಅವರ ಪತ್ನಿ ಸಾಕ್ಷಿ ಧೋನಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 40 ವರ್ಷ ವಯಸ್ಸಿನ ಧೋನಿರ ತೋಳಿನ ಮೇಲೆ ಗಿಣಿ ಕುಳಿತಿದ್ದು, ಈ ವೇಳೆ ಮಾಜಿ ನಾಯಕ ಕೂಲ್ ಆಗಿ ಚಹಾ ಸವಿಯುತ್ತಿದ್ದಾರೆ.

ಕಡಿಮೆ ಬೆಲೆಗೆ ಭರ್ಜರಿಯಾಗಿ ಬಂದಿದೆ ಟಾಟಾ ಆಲ್ಟ್ರೋಜ್ ಎಕ್ಸ್ ಇ ಪ್ಲಸ್

“ಮಾಹಿ ಮತ್ತವರ ಹನಿ,” ಎಂದು ಚಿತ್ರಗಳಿಗೆ ಕ್ಯಾಪ್ಷನ್ ಕೊಟ್ಟಿರುವ ಸಾಕ್ಷಿ ಶೇರ್‌ ಮಾಡಿರುವ ಈ ಪೋಸ್ಟ್‌ಗೆ 12 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಬಂದಿವೆ.

ರಾಂಚಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ನಾಯಿಗಳನ್ನು ಸಾಕಿಕೊಂಡಿರುವ ಧೋನಿ, ಕುದುರೆಗಳನ್ನೂ ಸಾಕುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಮುಕ್ತಾಯವಾದ 2021ರ ಐಪಿಎಲ್‌ನಲ್ಲಿ ಧೋನಿ ತಮ್ಮ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...