alex Certify ಐಪಿಎಲ್​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕ ಯಾರು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕ ಯಾರು ಗೊತ್ತಾ….?

ಇಂಡಿಯನ್ ಪ್ರೀಮಿಯರ್​ ಲೀಗ್​​​​ ಲಾಭದಾಯಕ ಟಿ 20 ಕ್ರಿಕೆಟ್​ ಆವೃತ್ತಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅನೇಕ ಯುವ ಕ್ರಿಕೆಟಿಗರು ಈ ಆವೃತ್ತಿಯ ಮೂಲಕ ಅನೇಕ ಯುವ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲೂ ಸ್ಥಾನ ಗಳಿಸಿದ್ದಾರೆ.

ಅನೇಕ ಹಿರಿಯ ಆಟಗಾರರು ಆವೃತ್ತಿಯ ಮೂಲಕ ತಾವೊಮ್ಮ ಉತ್ತಮ ನಾಯಕರು ಅನ್ನೋದನ್ನೂ ತೋರಿಸಿಕೊಟ್ಟಿದ್ದಾರೆ. ಹಾಗಾದರೆ ಈವರೆಗೆ ಯಾವ ನಾಯಕರ ಮುಂದಾಳತ್ವದಲ್ಲಿ ಹೆಚ್ಚು ಐಪಿಎಲ್​ ಪಂದ್ಯ ಗೆಲುವು ಕಂಡಿದೆ ಅನ್ನೋದರ ವಿವರ ಇಲ್ಲಿದೆ ನೋಡಿ :

ಎಂ.ಎಸ್.​ ಧೋನಿ – 115 ಜಯ

ಟೀಂ ಇಂಡಿಯಾ ತಂಡದಲ್ಲೂ ಅತ್ಯುತ್ತಮ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಹೇಂದ್ರ ಸಿಂಗ್​ ಧೋನಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿಯೂ ತಮ್ಮ ನಾಯಕತ್ವದ ಛಾಪನ್ನು ಮೂಡಿಸಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡವು ಎಂ.ಎಸ್.​ ಧೋನಿ ನಾಯಕತ್ವದಲ್ಲಿ 115 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಸಿಎಸ್​ಕೆ ಈವರೆಗೆ ಮೂರು ವರ್ಷಗಳ ಕಾಲ ಟ್ರೋಫಿ ಗೆದ್ದ ಕೀರ್ತಿ ಸಂಪಾದಿಸಿದೆ.

ವಿರಾಟ್​ ಕೊಹ್ಲಿ – 60 ಜಯ

ವಿರಾಟ್​ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿಯೂ ಕೂಡ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೆ ಐಪಿಎಲ್​ ಟ್ರೋಫಿ ಗೆಲ್ಲದೇ ಇದ್ದರೂ ಸಹ 60 ಪಂದ್ಯಗಳಲ್ಲಿ ತಂಡ ಜಯ ಕಂಡಿದೆ.

ರೋಹಿತ್​ ಶರ್ಮಾ – 72 ಜಯ

ಸಚಿನ್​ ತೆಂಡೂಲ್ಕರ್​ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್​ ಶರ್ಮಾ ವಹಿಸಿಕೊಂಡಿದ್ದಾರೆ. ಈ ಬಲಗೈ ಬ್ಯಾಟ್ಸ್​ಮನ್​​ ಇಲ್ಲಿವರೆಗೆ 4 ಐಪಿಎಲ್​​ ಟ್ರೋಫಿಯನ್ನು ಗೆದ್ದಿದ್ದಾರೆ ಮಾತ್ರವಲ್ಲದೇ ಮುಂಬೈ ತಂಡ ಶರ್ಮಾ ಕ್ಯಾಪ್ಟನ್ಸಿಯಲ್ಲಿ 72 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಗೌತಮ್​ ಗಂಭೀರ್​ – 71 ಜಯ

ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್​​​​​ ತಂಡಕ್ಕೆ 2 ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. 2012 ಹಾಗೂ 2014ರಲ್ಲಿ ನೈಟ್​ ರೈಡರ್ಸ್ ತಂಡ ಐಪಿಎಲ್​​ ಟ್ರೋಫಿ ಜಯಿಸಿದೆ. ಗೌತಮ್​ ಗಂಭೀರ್​ ನೇತೃತ್ವದಲ್ಲಿ ಈ ತಂಡ 71 ಪಂದ್ಯಗಳನ್ನು ಜಯಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...