
ಅನೇಕ ಹಿರಿಯ ಆಟಗಾರರು ಆವೃತ್ತಿಯ ಮೂಲಕ ತಾವೊಮ್ಮ ಉತ್ತಮ ನಾಯಕರು ಅನ್ನೋದನ್ನೂ ತೋರಿಸಿಕೊಟ್ಟಿದ್ದಾರೆ. ಹಾಗಾದರೆ ಈವರೆಗೆ ಯಾವ ನಾಯಕರ ಮುಂದಾಳತ್ವದಲ್ಲಿ ಹೆಚ್ಚು ಐಪಿಎಲ್ ಪಂದ್ಯ ಗೆಲುವು ಕಂಡಿದೆ ಅನ್ನೋದರ ವಿವರ ಇಲ್ಲಿದೆ ನೋಡಿ :
ಎಂ.ಎಸ್. ಧೋನಿ – 115 ಜಯ
ಟೀಂ ಇಂಡಿಯಾ ತಂಡದಲ್ಲೂ ಅತ್ಯುತ್ತಮ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ ತಮ್ಮ ನಾಯಕತ್ವದ ಛಾಪನ್ನು ಮೂಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಂ.ಎಸ್. ಧೋನಿ ನಾಯಕತ್ವದಲ್ಲಿ 115 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಸಿಎಸ್ಕೆ ಈವರೆಗೆ ಮೂರು ವರ್ಷಗಳ ಕಾಲ ಟ್ರೋಫಿ ಗೆದ್ದ ಕೀರ್ತಿ ಸಂಪಾದಿಸಿದೆ.
ವಿರಾಟ್ ಕೊಹ್ಲಿ – 60 ಜಯ
ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿಯೂ ಕೂಡ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೆ ಐಪಿಎಲ್ ಟ್ರೋಫಿ ಗೆಲ್ಲದೇ ಇದ್ದರೂ ಸಹ 60 ಪಂದ್ಯಗಳಲ್ಲಿ ತಂಡ ಜಯ ಕಂಡಿದೆ.
ರೋಹಿತ್ ಶರ್ಮಾ – 72 ಜಯ
ಸಚಿನ್ ತೆಂಡೂಲ್ಕರ್ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಈ ಬಲಗೈ ಬ್ಯಾಟ್ಸ್ಮನ್ ಇಲ್ಲಿವರೆಗೆ 4 ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ ಮಾತ್ರವಲ್ಲದೇ ಮುಂಬೈ ತಂಡ ಶರ್ಮಾ ಕ್ಯಾಪ್ಟನ್ಸಿಯಲ್ಲಿ 72 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.
ಗೌತಮ್ ಗಂಭೀರ್ – 71 ಜಯ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್ ತಂಡಕ್ಕೆ 2 ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. 2012 ಹಾಗೂ 2014ರಲ್ಲಿ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿ ಜಯಿಸಿದೆ. ಗೌತಮ್ ಗಂಭೀರ್ ನೇತೃತ್ವದಲ್ಲಿ ಈ ತಂಡ 71 ಪಂದ್ಯಗಳನ್ನು ಜಯಿಸಿದೆ.