alex Certify ಚೀನಾ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವ ನಡುವೆಯೇ ಕಾಂಗ್ರೆಸ್​ ನಾಯಕ ಹಾಗೂ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಮಿಸ್ಟರ್​​ 56ಗೆ ಚೀನಾ ಕಂಡರೆ ಭಯ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ.

ವಿಡಿಯೋ ಸಮೇತ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ಲಡಾಖ್​ ಭಾಗದಲ್ಲಿ ಚೀನಾ ಆಕ್ರಮಣದ ಬಗ್ಗೆ ಮಾಧ್ಯಮಗಳ ವರದಿಯನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ ಮಿಸ್ಟರ್​ 56 ಚೀನಾ ಕಂಡರೆ ಹೆದರುತ್ತಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

ಕಾಂಗ್ರೆಸ್​ ನಾಯಕನ ಈ ಟ್ವೀಟ್​ ಕೇಸರಿ ಪಾಳಯವನ್ನು ಕೆಣಕಿದೆ. ಹೀಗಾಗಿ ರಾಹುಲ್​ ಗಾಂಧಿಯ ಟ್ವೀಟ್​ಗೆ ಸಾಕಷ್ಟು ಬಿಜೆಪಿ ನಾಯಕರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡಿದ ರಾಹುಲ್​ ಗಾಂಧಿಗೆ ಬಿಜೆಪಿ ವಕ್ತಾರ ಆರ್.ಪಿ. ಸಿಂಗ್​ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆ ಯಾವುದೇ ಜ್ಞಾನವಿಲ್ಲದ ತರುಣ ರಾಹುಲ್​ ಗಾಂಧಿ ಎಂದು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...