alex Certify ಒಡವೆ ಕೇಳಿದ ಅತ್ತೆ, ಮಾವ: ಅತ್ಯಾಚಾರ, ದರೋಡೆ ಕಥೆ ಕಟ್ಟಿದ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡವೆ ಕೇಳಿದ ಅತ್ತೆ, ಮಾವ: ಅತ್ಯಾಚಾರ, ದರೋಡೆ ಕಥೆ ಕಟ್ಟಿದ ಸೊಸೆ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಅತ್ತೆ, ಮಾವನಿಗೆ ಒಡವೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ದರೋಡೆ ಮತ್ತು ಅತ್ಯಾಚಾರದ ಸುಳ್ಳು ಕಥೆಯನ್ನು ಸೃಷ್ಟಿಸಿ ಪೊಲೀಸರನ್ನು ದಾರಿ ತಪ್ಪಿಸಿದ್ದಾಳೆ.

ನಂತರ ಆಕೆಯ ತಪ್ಪೊಪ್ಪಿಗೆ ಪ್ರಕಾರ, ಮಹಿಳೆಯ ಮಾವ, ಅತ್ತೆ ತನ್ನ ಆಭರಣಗಳನ್ನು ಕೇಳುತ್ತಿದ್ದರು, ಆದ್ದರಿಂದ ಅವಳು ಪೊಲೀಸರ ಮುಂದೆ ದರೋಡೆ ಮತ್ತು ಅತ್ಯಾಚಾರದ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾಳೆ ಎಂದು ಹೇಳಲಾಗಿದೆ.

ಪೊಲೀಸರ ವಿಚಾರಣೆಯಲ್ಲಿ, ಮಹಿಳೆಯ ಹೇಳಿಕೆಗಳಲ್ಲಿ ಪದೇ ಪದೇ ಬದಲಾವಣೆಗಳಿಂದ ಪೊಲೀಸರಿಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ,

ಮಹಿಳಾ ಅಧಿಕಾರಿಗಳು ಆಕೆಯನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಿದಾಗ ಸಂಪೂರ್ಣ ಸತ್ಯ ಬಹಿರಂಗಪಡಿಸಿದ್ದಾಳೆ. ತನ್ನ ಅತ್ತೆ ಮತ್ತು ಮಾವ ತನಗೆ ಚಿನ್ನಾಭರಣಕ್ಕೆ ಬೇಡಿಕೆ ಇಡುತ್ತಿದ್ದು, ಈ ಸುಳ್ಳು ಕಥೆ ಹೆಣೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಆಭರಣಗಳನ್ನು ತನ್ನ ಪೋಷಕರ ಮನೆಯಲ್ಲಿ ಇಡಲಾಗಿದೆ ಎಂದು ಹೇಳಿದಳು.

ರಾತ್ರಿ ವೇಳೆ ದರೋಡೆ ನಡೆದಿದ್ದು, ಡಕಾಯಿತರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಮಾಹಿತಿ ತಿಳಿದ ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ಪ್ರಾರಂಭವಾದಾಗ, ಮಹಿಳೆ ದರೋಡೆಕೋರರ ಸಂಖ್ಯೆಯನ್ನು 20 ರಿಂದ ಕೆಲವೊಮ್ಮೆ 10 ರಿಂದ 12 ಕ್ಕೆ ಬದಲಾಯಿಸುತ್ತಿದ್ದಳು. ಚಿನ್ನ ಮತ್ತು ಬೆಳ್ಳಿಯ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಮಾತನಾಡಿದ ಮಹಿಳೆ, ನಂತರ ತನ್ನ ಆಭರಣಗಳನ್ನು ತನ್ನ ತಾಯಿಯ ಮನೆಯಲ್ಲಿ ಇಡಲಾಗಿದೆ ಎಂದು ಹೇಳಿದ್ದಾಳೆ.

ಸಂತ್ರಸ್ತೆಯೊಂದಿಗೆ ಶಾಂತವಾಗಿ ಮಾತನಾಡಿದಾಗ, ಅತ್ತೆ, ಮಾವ ಆಭರಣ ಕೇಳಿದ್ದರು. ಅವರಿಗೆ ಕೊಡವುದರಿಂದ ಪಾರಾಗಲು ಅತ್ಯಾಚಾರ ಮತ್ತು ದರೋಡೆ ನಡೆದಿರುವುದಾಗಿ ಸುಳ್ಲು ಹೇಳಿದ್ದಾಗಿ ಒಪ್ಪಿಕೊಂಡಳು. ಇದೀಗ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದು, ಮಹಿಳೆಯ ದೂರು ಸೇರಿದಂತೆ ಇಡೀ ವಿಷಯವು ನಕಲಿ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...