ಅನೈತಿಕ ಸಂಬಂಧ ಬಯಲಾದ ಬೆನ್ನಲ್ಲೇ ಮಹಿಳೆಯ ಹೆಗಲ ಮೇಲೆ ಆಕೆಯ ಪತಿಯನ್ನು ಕೂರಿಸಿ ಮೆರವಣಿಗೆ ಮಾಡಿ ಅಮಾನುಷವಾಗಿ ದೌರ್ಜನ್ಯ ಎಸಗಿದ ಪ್ರಕರಣ ಮಹಾರಾಷ್ಟ್ರದ ದೇವಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ದೇವಾಸ್ ಜಿಲ್ಲಾ ಕೇಂದ್ರ ಮತ್ತು ಇಂದೋರ್ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಬುಡಕಟ್ಟು ಪ್ರಾಬಲ್ಯದ ಹಳ್ಳಿಯಲ್ಲಿ ಘಟನೆ ಜೂನ್ 30 ರಂದು ನಡೆದಿದೆ. ಆಕೆಯ ಪತಿ ಸೇರಿದಂತೆ ಒಂದು ಡಜನ್ ಪುರುಷರನ್ನು ಬಂಧಿಸಲಾಗಿದೆ.
ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತಿಯನ್ನು ಹೊತ್ತುಕೊಂಡು ಹಳ್ಳಿಯಲ್ಲಿ ಸುತ್ತಾಡಲು ಒತ್ತಾಯಿಸಿದಾಗ ಅಲ್ಲಿದ್ದವರು ಆಕೆಯನ್ನು ನೋಡಿ ಅಪಹಾಸ್ಯ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಸುಮಾರು ಒಂದು ವಾರದ ಹಿಂದೆ ಮಹಿಳೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. 35 ವರ್ಷದ ಮಹಿಳೆ ತನ್ನ ಪತಿ ಮತ್ತು ಮಕ್ಕಳನ್ನು ತೊರೆದು ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯೊಂದಿಗೆ ಯಾರಿಗೂ ತಿಳಿಸದೆ ವಾಸಿಸಲು ಪ್ರಾರಂಭಿಸಿದ್ದಳು. ಆಕೆಯ ಪತಿ ಮತ್ತು ಇತರ ಕುಟುಂಬ ಸದಸ್ಯರು ಅವಳನ್ನು ಹುಡುಕಿ ನಂತರ ಪೊಲೀಸರನ್ನು ಸಂಪರ್ಕಿಸಿದ್ದರು.
ನೂಪುರ್ ಶರ್ಮಾ ನಾಲಿಗೆ ತಂದವರಿಗೆ ಎರಡು ಕೋಟಿ ರೂಪಾಯಿ ಘೋಷಿಸಿದ ಹರಿಯಾಣ ವ್ಯಕ್ತಿ
ಶನಿವಾರ ಆಕೆ ಇನ್ನೊಬ್ಬ ವ್ಯಕ್ತಿಯ ಮನೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಅವಳ ಪತಿ ಮತ್ತು ಅತ್ತೆಗೆ ಮಾಹಿತಿ ನೀಡಿದರು. ಕುಟುಂಬವು ಅಲ್ಲಿಗೆ ಹೋದಾಗ ಅಡಗಿಕೊಳ್ಳಲು ಪ್ರಯತ್ನಿಸಿದ್ದು ಆಕೆಯನ್ನು ಹಿಡಿದಿದ್ದಾರೆ. ಬಳಿಕ ಮನೆಯಿಂದ ಹೊರಗೆ ಕರೆದೊಯ್ದು ಗ್ರಾಮಸ್ಥರ ಮುಂದೆ ಹೊಡೆಯಲು ಪ್ರಾರಂಭಿಸಿದ್ದು, ಆಕೆಯ ಪತಿ ಸೇರಿದಂತೆ ಗ್ರಾಮಸ್ಥರು ನಿರ್ದಯವಾಗಿ ಹಲ್ಲೆ ಮಾಡಿದ್ದಾರೆ. ನಂತರ ಅವಳು ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತುಕೊಂಡು ಒತ್ತಾಯಿಸಲಾಗಿದೆ.
ಆಕೆ ಹಾಗೂ ಪ್ರಿಯಕರನಿಗೆ ಗ್ರಾಮಸ್ಥರು ಬಲವಂತವಾಗಿ ಶೂಗಳ ಹಾರವನ್ನು ಹಾಕಿ ಗ್ರಾಮದ ಸುತ್ತಲೂ ಮೆರವಣಿಗೆ ನಡೆಸಿದ್ದು, ಈ ವೇಳೆ ಸ್ಥಳಿಯರು ತಮ್ಮ ಮೊಬೈಲ್ ಫೋನ್ಗಳಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು ಗ್ರಾಮಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದು, ಆಕೆ ಈಗ ತನ್ನ ತಾಯಿಯ ಮನೆಯಲ್ಲಿದ್ದಾರೆ.