ಪೊಲೀಸರು ಜಾನುವಾರು ಕಳ್ಳತನದ ಪ್ರಕರಣವನ್ನು ದಾಖಲಿಸಲು ನಿರಾಕರಿಸಿದ್ದರಿಂದ ಗ್ರಾಮಸ್ಥರು ಕರುಗಳೊಂದಿಗೆ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
ಅಲ್ಲಿನ ಅಶೋಕನಗರ ಜಿಲ್ಲೆಯ ಹಳ್ಳಿಯೊಂದರ ಜನರು ಕರುಗಳೊಂದಿಗೆ ಪೊಲೀಸ್ ಅಧೀಕ್ಷಕರ ಕಚೇರಿಯ ಹೊರಗೆ ನಡೆಸಿದ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಣಿಸಿಕೊಂಡ ನಂತರ ದನ ಕಳ್ಳತನ ಕುರಿತು ಎಫ್ಐಆರ್ ದಾಖಲಿಸಿದ್ದಾರೆ.
ಮಹೋಲಿ ಗ್ರಾಮದ ನಿವಾಸಿ ಸೇರಿದ ದೌಲತ್ ಪಾಲ್ ಎಮ್ಮೆಗಳನ್ನು ಮೂರು ದಿನಗಳ ಹಿಂದೆ ಸಮೀಪದ ಕಾಡಿನಲ್ಲಿ ಮೇಯಲು ಬಿಟ್ಟಿದ್ದು, ಐದು ಜಾನುವಾರುಗಳು ಹಿಂತಿರುಗಿರಲಿಲ್ಲ. ಹೀಗಾಗಿ ಇಶಗಢ ಪೊಲೀಸ್ ಠಾಣೆಗೆ ಕಳ್ಳತನದ ಬಗ್ಗೆ ದೂರು ನೀಡಲು ಸಂಪರ್ಕಿಸಿದರು,
ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ನಂತರ ಅವರು ಐದು ಕರುಗಳು ಮತ್ತು ಇತರ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಜಾನುವಾರು ಕಳ್ಳತನ ಹೆಚ್ಚಿದ್ದು, 3.5 ಲಕ್ಷ ರೂ.ಗೆ ಎಮ್ಮೆಗಳನ್ನು ಖರೀದಿಸಿ ಸಾಲ ಪಡೆದಿದ್ದಾಗಿ ಪಾಲ್ ಕಳವಳ ವ್ಯಕ್ತಪಡಿಸಿದರು.