ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗಿಲ್ಲ ಪ್ರವೇಶ 13-10-2021 1:18PM IST / No Comments / Posted In: Latest News, India, Live News ನವರಾತ್ರಿಯ ಸಮಯದಲ್ಲಿ ಉತ್ತರ ಭಾರತದ ಹಲವೆಡೆ ಗರ್ಬಾ ಮಾಡಲಾಗುತ್ತದೆ. ಸಾಮಾನ್ಯವಾಗಿ ಗುಜರಾತಿಗಳು ನವರಾತ್ರಿಯ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನು ಮಾಡುವ ಮೂಲಕ ಸಂಭ್ರಮಿಸ್ತಾರೆ. BREAKING: ವಾಹನ ಪರವಾನಿಗೆ ಅವಧಿ ನವೀಕರಣ ಕುರಿತಂತೆ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಮಾಹಿತಿ ಆದರೆ ಮಧ್ಯ ಪ್ರದೇಶ ರತ್ಲಮ್ ಎಂಬಲ್ಲಿ ವಿಶ್ವ ಹಿಂದೂ ಪರಿಷತ್ ಸದಸ್ಯರು, ಎಲ್ಲಾ ದುರ್ಗಾ ಪೂಜಾ ಪೆಂಡಲ್ಗಳಲ್ಲಿ ಪೋಸ್ಟರ್ ಅಂಟಿಸಿದ್ದು ಇದರಲ್ಲಿ ಗರ್ಬಾಗೆ ಪ್ರವೇಶಿಸಲು ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮೀಯರಿಗೆ ಅನುಮತಿ ಇಲ್ಲ ಎಂದು ಬರೆಯಲಾಗಿದೆ. ಈ ವಿಚಾರವಾಗಿ ಮಾತನಾಡಿದ ರತ್ಲಮ್ ಜಿಲ್ಲೆಯ ಎಸ್ಪಿ ಗೌರವ್ ತಿವಾರಿ, ಮಾಧ್ಯಮದ ಮೂಲಕ ನಮಗೆ ಈ ಪೋಸ್ಟರ್ಗಳ ಬಗ್ಗೆ ಮಾಹಿತಿ ತಿಳಿಯಿತು. ಆದರೆ ಇಲ್ಲಿಯವರೆಗೆ ಯಾರೂ ಈ ಸಂಬಂಧ ದೂರನ್ನು ನೀಡಿಲ್ಲ. ಆದರೆ ನಾವು ಖಂಡಿತವಾಗಿಯೂ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಜಂಬೂಸವಾರಿಯಲ್ಲಿ ಭಾಗವಹಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಗರ್ಬಾಕ್ಕೆ ಆಗಮಿಸಿದ್ದ ಸೌರವ್ ಎಂಬವರು ಪೋಸ್ಟರ್ ಹಾಕಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಒಂದು ನಿರ್ದಿಷ್ಟ ಸಮುದಾಯದ ಜನರು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಪಡೆದು ಹಿಂದೂ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಕಲಿ ಹೆಸರುಗಳನ್ನು ಇಟ್ಟುಕೊಂಡು ಹಿಂದೂ ಹೆಣ್ಣು ಮಕ್ಕಳನ್ನು ಪುಸಲಾಯಿಸುತ್ತಾರೆ ಬಳಿಕ ಅವರನ್ನು ಮದುವೆಯಾಗಿ ಮತಾಂತರ ಮಾಡುತ್ತಾರೆ ಎಂದು ಹೇಳಿದ್ದಾರೆ. ಪೆಂಡಾಲ್ಗೆ ಆಗಮಿಸಿದ ಯಾವುದೇ ಹಿಂದುಯೇತರ ವ್ಯಕ್ತಿ ಮಹಿಳೆಯರಿಗೆ ಕಿರುಕುಳ ನೀಡುವುದು ಕಂಡುಬಂದಲ್ಲಿ, ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿಕೆ ನೀಡಿದ್ದಾರೆ.