ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸಲು ಪೊಲೀಸರ ವಿಶೇಷ ಪ್ರಯತ್ನ 11-06-2021 11:16AM IST / No Comments / Posted In: Latest News, India, Live News ಕೇಂದ್ರ ಸರ್ಕಾರವು ಡಿಸೆಂಬರ್ ತಿಂಗಳದ ಅಂತ್ಯದೊಳಗಾಗಿ ದೇಶದ ಜನತೆಗೆ ಕೊರೊನಾ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಪ್ರಿಯಕರನೊಂದಿಗೆ 11 ವರ್ಷದ ಬಳಿಕ ಪತ್ತೆಯಾದ ಯುವತಿ ವಾಸಿಸುತ್ತಿದ್ದುದ್ದೆಲ್ಲಿ ಗೊತ್ತಾ…? ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದ್ದು ಲಸಿಕೆ ಅಭಿಯಾನಕ್ಕೆ ಹಿನ್ನಡೆ ಉಂಟು ಮಾಡಿದ್ದರೆ ಇನ್ನೂ ಹಲವೆಡೆ ಲಸಿಕೆಯ ಬಗೆಗಿನ ತಪ್ಪು ತಿಳುವಳಿಕೆಯಿಂದಾಗಿ ಜನತೆ ಲಸಿಕಾ ಕೇಂದ್ರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜನರಲ್ಲಿ ಇಂತಹ ಭಾವನೆಗಳನ್ನ ಕಡಿಮೆ ಮಾಡುವ ಸಲುವಾಗಿ ಮಧ್ಯ ಪ್ರದೇಶದ ಪೊಲೀಸರು ಹೊಸ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ. ಪತಿ ಹತ್ಯೆ ನಂತ್ರ ಖಾಸಗಿ ಅಂಗ ಕತ್ತರಿಸಿ ಬೇಯಿಸಿದ ಪತ್ನಿ..! ಮಧ್ಯ ಪ್ರದೇಶದ ನಿವಾರಿ ಎಂಬಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಪೊಲೀಸರು ವಿಶೇಷವಾದ ಬ್ಯಾಡ್ಜ್ನ್ನು ನೀಡುತ್ತಿದ್ದಾರೆ. ಈ ಬ್ಯಾಡ್ಜ್ನ ಮೇಲೆ ʼಲಸಿಕೆ ಪಡೆದಿರುವ ನಾನು ದೇಶಭಕ್ತʼ ಎಂದು ಬರೆಯಲಾಗಿದೆ. ಇದು ಮಾತ್ರವಲ್ಲದೇ ಕೊರೊನಾ ಲಸಿಕೆ ಪಡೆಯದವರಿಗೂ ಪೊಲೀಸರು ಪೋಸ್ಟರ್ ಅಂಟಿಸುತ್ತಿದ್ದಾರೆ. ಇದರ ಮೇಲೆ ನಾನು ಲಸಿಕೆ ಪಡೆದಿಲ್ಲ. ನನ್ನಿಂದ ದೂರ ಇರಿ ಎಂದು ಬರೆಯಲಾಗಿದೆ. #WATCH Police in Madhya Pradesh's Niwari honour those who have taken COVID19 vaccine with a badge that says, "I'm a patriot as I'm vaccinated", & those who haven't got vaccinated being made to wear a poster carrying a message, "Stay away from me as I am not vaccinated yet" pic.twitter.com/cmmv9HrlSf — ANI (@ANI) June 9, 2021