alex Certify ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಗೆ ಗರ್ಭಪಾತ: ಭ್ರೂಣ ಹತ್ಯೆ ಮಾಡಿದ ವೈದ್ಯೆ ಸೇರಿ ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಗೆ ಗರ್ಭಪಾತ: ಭ್ರೂಣ ಹತ್ಯೆ ಮಾಡಿದ ವೈದ್ಯೆ ಸೇರಿ ನಾಲ್ವರು ಅರೆಸ್ಟ್

ಮಧ್ಯಪ್ರದೇಶದ ಬೆತಲ್‌ ನಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಸೇರಿ ನಾಲ್ವರು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 16 ರಂದು ಕೋಚಿಂಗ್ ಸೆಂಟರ್‌ ನ ನಿರ್ವಾಹಕ ಪ್ರಕಾಶ್ ಭೋಜ್ಕರ್ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಗೆ ಆರೋಪಿ ಜೀವ ಬೆದರಿಕೆ ಹಾಕಿದ್ದರಿಂದ ಹೆದರಿದ ಹುಡುಗಿ ಯಾವುದೇ ದೂರು ದಾಖಲಿಸಲಿಲ್ಲ. ಯಾರಿಗೂ ವಿಷಯ ತಿಳಿಸಲಿಲ್ಲ.

ಆಕೆ ಗರ್ಭಿಣಿಯಾದ ನಂತರದಲ್ಲಿ ಆರೋಪಿಯ ಪೋಷಕರು ಆಕೆಯನ್ನು ಬೇತಲ್‌ ನ ಕರುಣಾ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಮಾರ್ಚ್ 22 ರಂದು ಗರ್ಭಪಾತ ಮಾಡಲಾಗಿದೆ.

ಪೊಲೀಸರಿಗೆ ವಿಷಯ ತಿಳಿಸಿದ ನಂತರ, ಆರೋಪಿ ಮತ್ತು ಗರ್ಭಪಾತ ಮಾಡಿದ ವೈದ್ಯರ ವಿರುದ್ಧ ಆಮ್ಲಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಹಾಗೂ ಆತನ ಪೋಷಕರಿಬ್ಬರನ್ನೂ ಮೊದಲೇ ಬಂಧಿಸಿದ್ದರು. ಈಗ ಆಸ್ಪತ್ರೆಯ ಮಹಿಳಾ ವೈದ್ಯೆ ವಂದನಾ ಕಾಪ್ಸೆ ಅವರನ್ನೂ ಭ್ರೂಣ ಹತ್ಯೆಯ ಸೆಕ್ಷನ್ 315 ರ ಅಡಿಯಲ್ಲಿ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...