ಭೋಪಾಲ್: ಗೋವುಗಳ ರಕ್ಷಣೆಗೆ ದಾನ, ಆಹಾರದ ವ್ಯವಸ್ಥೆ ಮಾಡಿರಿ ಎಂದು ಕೇಳುವವರು ಸಾಮಾನ್ಯವಾಗುತ್ತಿದ್ದಾರೆ. ಆದರೆ, ಮಧ್ಯಪ್ರದೇಶದ ಬಿಜೆಪಿಯ ಸಚಿವರೊಬ್ಬರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವವರಿಗೆ ಅರ್ಹತೆಯಾಗಿ ಹಸುಗಳನ್ನು ಸಾಕುವಂತೆ ಚುನಾವಣಾ ಆಯೋಗವೇ ಕಾನೂನು ತರಬೇಕು ಎಂದಿದ್ದಾರೆ.
ಮ.ಪ್ರ.ದಲ್ಲಿ ಪರಿಸರ ಮತ್ತು ಪುನರ್‍ಬಳಕೆ ಇಂಧನ ಸಚಿವರಾಗಿರುವ ಹರ್‍ದೀಪ್ ಸಿಂಗ್ ದಾಂಗ್ ಅವರೇ ಇಂಥ ಆಗ್ರಹ ಇರಿಸಿರುವ ವ್ಯಕ್ತಿ.
SHOCKING: ಸುಪ್ರೀಂ ಕೋರ್ಟ್ ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ಅತ್ಯಾಚಾರ ಸಂತ್ರಸ್ತೆ
ಅಲ್ಲದೆ, ರಾಜ್ಯ ಸರಕಾರಿ ನೌಕರರು ಮಾಸಿಕ 25 ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುತ್ತಿದ್ದರೆ, ಅಂಥವರಿಂದ ಪ್ರತಿ ತಿಂಗಳು 500 ರೂ.ಗಳನ್ನು ಗೋರಕ್ಷಣೆಗಾಗಿ ಪಡೆಯುವುದು ಕಡ್ಡಾಯಗೊಳಿಸಿ ಎಂದು ಕೂಡ ಸಿಂಗ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಕೇಂದ್ರೀಯ ಚುನಾವಣಾ ಆಯೋಗಕ್ಕೆ ಶೀಘ್ರವೇ ಪತ್ರ ಕೂಡ ಬರೆಯುವೆ ಎಂದಿದ್ದಾರೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಸಿಎಂ ಕಮಲ್‍ನಾಥ್ ಅವರು ರಾಜ್ಯದಲ್ಲಿ 1000 ಸ್ಮಾರ್ಟ್ ಗೋಶಾಲೆಗಳನ್ನು ತೆರೆಯುವ ಸಿದ್ಧತೆ ನಡೆಸಿದ್ದರು. ಆದರೆ ಬಿಜೆಪಿ ಸರಕಾರ ಇದನ್ನು ಕಡೆಗಣಿಸಿದೆ ಎಂದು ಪ್ರತಿಪಕ್ಷ ಟೀಕಿಸಿದೆ.